ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆ 15ನೇ ಹಣಕಾಸಿನ 76 ಲಕ್ಷ ರೂ. ಅನುದಾನಲ್ಲಿ ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ (ಸಿಸಿ) ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಟ್ಟಣದ ಮುಖ್ಯ ಬಜಾರ್ ರಸ್ತೆ ಶಿಗ್ಲಿ ನಾಕಾದಿಂದ ಗ್ರಾಮ ಚಾವಡಿವರೆಗೆ ಮಾತ್ರ ಅಭಿವೃದ್ಧಿ ಹೊಂದಿ ದೂದಪೀರಾಂ ದರ್ಗಾವರೆಗೆ ಹದಗೆಟ್ಟಿತ್ತು. ಇದರಿಂದ ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರು, ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಕೆಂಚಲಾಪುರ ಓಣಿಯವರೆಗೆ ರಸ್ತೆ ಅಭಿವೃದ್ಧಿಯನ್ನು ಅಲ್ಪಸಂಖ್ಯಾತರ ಇಲಾಖೆಯಿಂದ ಬಂದಂತಹ 2 ಕೋಟಿ ಅನುದಾನದಲ್ಲಿ ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಅತ್ಯಂತ ಜನಸಂದಣಿ ರಸ್ತೆಯಾಗಿದ್ದರಿಂದ ಗುತ್ತಿಗೆದಾರರು ತೀವ್ರಗತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿದೋಶ್ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಸದಸ್ಯರಾದ ಪ್ರವೀಣ ಬಾಳಿಕಾಯಿ, ರಾಜೀವ ಕುಂಬಿ, ಬಸವರಾಜ ಓದುನವರ, ರಮೇಶ ಗಡದವರ, ಮಹಾದೇವಪ್ಪ ಅಣ್ಣಿಗೇರಿ, ರಮೇಶ ಗಡದವರ, ಜಯಕ್ಕ ಕಳ್ಳಿ, ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಕಿರಣ ನವಲೆ, ಎಸ್.ಕೆ ಹವಲ್ದಾರ, ಎಂ.ಆರ್. ಪಾಟೀಲ, ಅನಿಲ ಮುಳಗುಂದ, ಫಕೀರೇಶ ನಂದೆಣ್ಣವರ, ಅಮರೀಶ ತೆಂಬದಮನಿ, ಗಿರೀಶ ಚೌರಡ್ಡಿ, ಪ್ರಕಾಶ ಮಾದನೂರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಅರೋಗ್ಯ ನಿರೀಕ್ಷಕ ಮಂಜುನಾಥ, ಮುದಗಲ್, ಇಂಜಿನಿಯರ್ ವೀರೇಂದ್ರಸಿಂಗ್ ಕಾಟೆವಾಲೆ, ಹನುಮಂತಪ್ಪ ನಂದೆಣ್ಣವರ, ಇತರರಿದ್ದರು.