ಜಿಲ್ಲೆ

ರಸ್ತೆ ನಿರ್ಮಾಣಕ್ಕೆ ಎಲ್ಲರ ಬೆಂಬಲ ಅವಶ್ಯ

ಪ್ರಶಾಂತ ಹೂಗಾರ

ನಂದೇಶ್ವರ: ರಸ್ತೆ ಅಭಿವೃದ್ಧಿಪಡಿಸುವಾಗ ಅಕ್ಕಪಕ್ಕದ ಜಮೀನು ರೈತರು ಸಹಕಾರ ನೀಡಬೇಕು. ರಸ್ತೆ ಅಭಿವದ್ಧಿಪಡಿಸುವ ಮೊದಲೇ ರೈತರು ಪೈಪ್‌ಲೈನ್ ಅಳವಡಿಸಿಕೊಂಡರೆ ರಸ್ತೆ ಬೇಗ ಹಾಳಾಗುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಮಹಿಷವಾಡಗಿ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಮಹಿಷವಾಡಗಿ-ಜನವಾಡ ಮಧ್ಯದ ರಸ್ತೆ 45 ಲಕ್ಷ ರೂ. ವೆಚ್ಚದಲ್ಲಿ, ಕರ್ಲಗಡ್ಡಿ ತೋಟದ ರಸ್ತೆ 3.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲದೆ, ಗ್ರಾಮದ ಮಿಶೆವ್ವದೇವಿ ಸಮುದಾಯ ಭವನ ಉದ್ಘಾಟನೆ ಮಾಡಲಾಗಿದೆ. ಸಮುದಾಯ ಭವನ ಕಲ್ಯಾಣ ಕಾರ್ಯಗಳಿಗೆ ಉಪಯೋಗವಾಗಬೇಕು ಎಂದರು.

ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆಗಾಗಿ ಶಾಸಕರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಾಬಾಸಾಹೇಬ ಪಾಟೀಲ, ನಿವತ್ತ ಅಭಿಯಂತ ಅರುಣ ಯಲಗುದ್ರಿ, ತಾಪಂ ಮಾಜಿ ಸದಸ್ಯರಾದ ಜಡೆಪ್ಪ ಕುಂಬಾರ, ನೇಮಿನಾಥ ನಂದಗಾಂವ, ಅಭಿಯಂತ ಅಮರ ದುರ್ಗಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಬಸಗೊಂಡ ಮುಗ್ಗನವರ, ಜಿಪಂ ಎಇಇ ವೀರಣ್ಣ ವಾಲಿ, ಜಿನ್ನಪ್ಪ ನಂದಗಾಂವ, ವಕೀಲ ಡಿ.ಬಿ.ಠಕ್ಕಣ್ಣವರ, ಅಶೋಕ ಮುಗ್ಗನವರ ಇತರರಿದ್ದರು.