ಜಿಲ್ಲೆ

ರಾತ್ರಿ ಸಂಚಾರ ನಿರ್ಬಂಧ

Mangaluru - Nishantha Narayana


ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ರಾತ್ರಿ ೮ರಿಂದ ಬೆಳಗ್ಗೆ ೬ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಽಸಲಾಗಿದೆ.

ಬೆಳಗ್ಗಿನ ಸಮಯ ಅರ್ಧರಸ್ತೆಯನ್ನು ಮಾತ್ರ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಮಳೆ ಹೆಚ್ಚಾಗಿರುವ ಕಾರಣದಿಂದ ಮತ್ತೆ ಕುಸಿತಗೊಳ್ಳುವ ಸಾಧ್ಯತೆ ಇರುವುದರಿಂದ ನಿಷೇಧ ಹೇರಲಾಗಿದ್ದು, ಈ ಸಮಯದಲ್ಲಿ ಪೇಟೆ ಮೂಲಕ ಇರುವ ರಸ್ತೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.