ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಕ್ರಾಸ್ ಸಮೀಪ ಗುಡ್ಡ ಕುಸಿತವಾಗಿದೆ.
ಅತಿಯಾದ ಮಳೆಯಿಂದ ತೆಂಕಿಲ ಸಮೀಪದ ಗುಡ್ಡ ಕುಸಿತವಾಗಿ ರಸ್ತೆ ಪೂರ್ತಿ ಮಣ್ಣು ತುಂಬಿಕೊಂಡಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಅಲ್ಲಿಯ ತನಕ ಪುತ್ತೂರು ಪೇಟೆಯ ಮೂಲಕ ವಾಹನ ಸಂಚಾರ ಮಾಡಬೇಕಾಗಿದೆ.
ಗುಡ್ಡೆಯ ಇನ್ನೊಂದು ಭಾಗದಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದ ಈ ಕುಸಿತ ಆಗಿರಬಹುದೆಂಬ ಆರೋಪ ಕೇಳಿ ಬಂದಿದೆ.