ಜಿಲ್ಲೆ

ರಸ್ತೆ ತಿರುವುಗಳಿಗೆ ರಿಪ್ಲೆಕ್ಟರ್

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಹೊಸಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯ ಘಾಟ್ ಪ್ರದೇಶದಲ್ಲಿ ಕಡಿದಾದ ತಿರುವುಗಳಲ್ಲಿ ಪೊಲೀಸರು ರಿಪ್ಲೆಕ್ಟರ್‌ಗಳ ಅಳವಡಿಕೆ ಮಾಡಿರುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಅರಣ್ಯ ಪ್ರದೇಶದ ಮೂಲಕ ಹೊಸಹಳ್ಳಿ-ದೊಡ್ಡಬಳ್ಳಾಪುರ ರಸ್ತೆ ಹಾದು ಹೋಗಿದ್ದು, ಈ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಕಡಿದಾದ ತಿರುವುಗಳಿವೆ, ರಾತ್ರಿ ವೇಳೆ ತಿರುವುಗಳು ವಾಹನ ಸವಾರರ ಗಮನಕ್ಕೆ ಸ್ಪಷ್ಟವಾಗಿ ಕಾಣುವುದಿಲ್ಲ. ಇದರಿಂದ ವಾಹನಗಳು ರಸ್ತೆಯ ಕಮರಿಗೆ ಬೀಳುವ ಅಪಾಯವಿದೆ ಎಂಬ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಹಲವು ಅಪಘಾತ ಪ್ರಕರಣಗಳು ನಡೆದಿದ್ದು, ಹಲವರು ಗಾಯಗೊಂಡಿರುವ ಪ್ರಕರಣಗಳು ನಡೆದಿವೆ, ಈ ಹಿನ್ನೆಲೆಯಲ್ಲಿ ಅಪಘಾತಗಳನ್ನ ತಡೆಯಲು ಹೊಸಹಳ್ಳಿ ಠಾಣಾ ಪೊಲೀಸರು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ತಿರುವುಗಳು ಸ್ಪಷ್ಟವಾಗಿ ಗೋಚರಿಸುವಂತೆ ರಸ್ತೆಯ ತಡೆಗೋಡೆಗಳಿಗೆ ರಿಫ್ಲೆಕ್ಟರ್ ಅಳವಡಿಸಿದ್ದಾರೆ.

ಇನ್ನುಂದು ಬಾಕಿ ಇದೆ: ಈ ಅಪಾಯಕಾರಿ ತಿರುವಿನ ರಸ್ತೆಯಲ್ಲಿ ಎರಡು ಕಡೆ ಕ್ಯಾಸ್‌ಬ್ಯಾರಿಕೇಡ್ ಇದ್ದು ಪ್ರಸ್ತುತ ಒಂದಕ್ಕೆ ರೇಡಿಯಮ್ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ, ಮುಂದೆ ಇನ್ನೊಂದು ಕ್ಯಾಸ್‌ಬ್ಯಾರಿಕೇಡ್ ಇದ್ದು ಶೀಘ್ರದಲ್ಲೇ ಅದಕ್ಕೂ ರಿಪ್ಲೆಕ್ಟರ್ ಹಾಕುವ ಕೆಲಸ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜನಜಾಗೃತಿಗಾಗಿ ಕಾರ್ಯ: ಅರಣ್ಯ ಪ್ರದೇಶದಲ್ಲಿ ಎಲ್ಲಿಯೂ ವಿದ್ಯುತ್ ವ್ಯವಸ್ಥೆ ಇಲ್ಲ, ರಾತ್ರಿ ವೇಳೆ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಕಡಿದಾದ ತಿರುವು ಕಾಣದಿರುವುದರಿಂದ ಸ್ಪಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಈ ರೇಡಿಯಂ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ, ಇದರಿಂದ ವಾಹನಗಳ ಬೆಳಕು ಬ್ಯಾರಿಕೇಡ್ ಮೇಲೆ ಬೀಳುತ್ತಿದ್ದಂತೆ ದೀಪಗಳಂತೆ ಗೋಚರವಾಗುತ್ತವೆ ವಾಹನ ಸವಾರರು ಎಚ್ಚೆತ್ತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗರೂಕರಾಗಿರಿ: ರಸ್ತೆ ಅಪಘಾತಗಳಿಗೆ ತಿರುವುಗಳು ಕಾರಣವಾಗಿದ್ದು, ಅಪಘಾತಗಳನ್ನು ತಡೆಯುವ ಕಾರಣಕ್ಕೆ ರಿಫ್ಲೆಕ್ಟರ್‌ಗಳನ್ನು ಹಾಕಲಾಗಿದೆ, ವಾಹನ ಸವಾರರು ರಾತ್ರಿ ವೇಳೆ ಜಾಗರೂಕರಾಗಿ ವಾಹನಗಳನ್ನು ಚಾಲನೆ ಮಾಡಬೇಕು, ವೇಗಮೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೊಸಹಳ್ಳಿ ಠಾಣಾ ಪೊಲೀಸರು ಮನವಿ ಮಾಡಿದ್ದಾರೆ.

ಬ್ಯಾರಿಕೇಡ್ ದುರಸ್ತಿ: ಹೊಸಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿನ ಕ್ರಾಸ್‌ಬ್ಯಾರಿಕೇಡ್‌ಗಳಿಗೆ ವಾಹನಗಳು ಗುದ್ದಿ ಜಖಂಗೊಂಡಿತ್ತು. ಕೆಲವು ಕಡೆಗಳಲ್ಲಿ ಮುರಿದು ಬಿದ್ದಿತ್ತು. ಅದನ್ನು ದುರಸ್ತಿ ಮಾಡಿ ಸುಸ್ಥಿತಿಗೆ ತರಲಾಗಿದೆ ಅಪಘಾತಗಳು ಮರುಕಳಿಸದಂತೆ ತಡೆಯಲು ಬ್ಯಾರಿಕೇಡ್‌ಗಳಿಗೆ ರೇಡಿಯಂ ರಿಪ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ.

ಹೊಸಹಳ್ಳಿ- ದೊಡ್ಡಬಳ್ಳಾಪುರ ರಸ್ತೆ ಹಾದು ಹೋಗುವ ಪ್ರದೇಶ ಅರಣ್ಯವಲಯವಾಗಿದ್ದು, ಈ ಭಾಗದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ ಜತೆಗೆ ಕಡಿದಾದ ತಿರುವುಗಳಿರುವುದರಿಂದ ವಾಹನ ಸವಾರರಿಗೆ ತಿರುವುಗಳು ಗೋಚರವಾಗದೆ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ಕ್ರಾಸ್ ಬ್ಯಾರಿಕೇಡ್‌ಗಳಿಗೆ ರಿಪ್ಲೆಕ್ಟರ್ ಅಳವಡಿಸಲಾಗಿದೆ. ವಾಹನ ಸವಾರರು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು.

ರಾವ್‌ಗಣೇಶ್ ಜನಾರ್ಧನ್, ಹೊಸಹಳ್ಳಿ ಠಾಣೆ ಇನ್‌ಸ್ೆಕ್ಟರ್