ಜಿಲ್ಲೆ

<50 ಲಕ್ಷ ವೆಚ್ಚದಲ್ಲಿ ರಸ್ತೆ, ಚರಂಡಿ ನಿರ್ಮಾಣ

ತುಮಕೂರು ಡೆಸ್ಕ್

ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯವರು ವಾಸಿಸುತ್ತಿರುವ ಕಾಲನಿಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿಮಾರ್ಣ ಮಾಡಲು ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.

ಭೂ ಸೇನಾ ಅಭಿವೃದ್ಧಿ ನಿಗಮದಲ್ಲಿ ಕೊಡಗೀಹಳ್ಳಿಯ ಎಸ್​ಸಿ ಕಾಲನಿ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಈ ಹಿನ್ನಲೆಯಲ್ಲಿ ಮೊದಲ ಹಂತದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಪ.ಜಾತಿ ಮತ್ತು ಪ.ಪಂಗಡದ ಎಲ್ಲ ಕಾಲನಿಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಸೂಚಿಸಿದರು.

ಮುಖಂಡರಾದ ಪಾಲಣ್ಣ, ಹೊನ್ನಪ್ಪ, ಕಣತೂರು ರವಿಕುಮಾರ್​, ಹಾವಾಳ ಕೃಷ್ಣ, ಬೂವನಹಳ್ಳಿ ಪುನಿತ್​, ತೊರೆಮಾವಿನಹಳ್ಳಿ ರಾಮಕೃಷ್ಣ, ಮೊರಸರಕೊಟ್ಟಿಗೆ ಕಾಂತರಾಜು, ಮಲ್ಲಾಘಟ್ಟ ಆನಂದ್​ ಇದ್ದರು.