ಜಿಲ್ಲೆ

ಭದ್ರಾವತಿ ಬಳಿ ಮದುವೆ ದಿಬ್ಬಣದ ಬಸ್​ ಹರಿದು ಮೂವರು ಸ್ಥಳದಲ್ಲೇ ಸಾವು

lakshmihegde

ಶಿವಮೊಗ್ಗ: ಮದುವೆ ದಿಬ್ಬಣದ ಬಸ್​ ಬೈಕ್​ ಮೇಲೆ ಹರಿದ ಪರಿಣಾಮ ಬೈಕ್​ನಲ್ಲಿದ್ದ ದಂಪತಿ ಹಾಗೂ ಮಗ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭದ್ರಾವತಿ ತಾಲೂಕು ಮೂಡಲವಿಠಲಾಪುರ ಬಳಿ ಸಂಭವಿಸಿದೆ.

ಹನುಂತಪುರದ ವೀರಪ್ಪ(45) ಆಶಾ(34) ಹಾಗೂ ಹೇಮಂತ್ (7) ಮೃತರು.

ಹನುಮಂತಪುರದಿಂದ ವೀರಪ್ಪ ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ತಪಾಸಣೆ ಮಾಡಿಸಲು ಮಗನೊಂದಿಗೆ ಹೊಳೆಹೊನ್ನೂರಿನ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗದಲ್ಲಿ ನಡೆದ ಮದುವೆ ಮುಗಿಸಿಕೊಂಡು ಗುಡುಮಘಟಕ್ಕೆ ಬಸ್​ ಸಂಚರಿಸುತ್ತಿತ್ತು. ವೇಗವಾಗಿ ಬಂದ ಬಸ್​ ಹರಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೊಳೆಹೊನ್ನೂರು ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)