ಜಿಲ್ಲೆ

ರಸ್ತೆ ಅಪಘಾತ ಶಿಕ್ಷಕ ಸಾವು

Uttara Kannada - Subash Hegde

ಕಾರವಾರ: ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ‌ ಸ್ಥಳದಲ್ಲೆ ಮೃತಪಟ್ಟ ಘಟನೆ ನಗರದ ಹಬ್ಬುವಾಡ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ದೇವಳಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ‌ ಉಮೇಶ ಗುನಗಿ(53) ಮೃತರು. ಬೆಳಗ್ಗೆ ಕಾರವಾರ ಶಹರದಿಂದ ದೇವಳಮಕ್ಕಿ ಕಡೆಗೆ ಶಾಲೆ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುವಾಗ ಅವರ ಮೈ ಮೇಲೆ ಲಾರಿ ಹತ್ತಿದೆ.

ಶವ ಇಟ್ಟು ಪ್ರತಿಭಟನೆ
ಕಾರವಾರ-ಹಬ್ಬುವಾಡ ರಸ್ತೆಗೆ ವರ್ಷದ ಹಿಂದೆ ಕಾಂಕ್ರಿಟ್ ಹಾಕಲಾಗಿತ್ತು. ಆದರೆ, ನಡುವೆ ಒಂದು ಅಡಿ ಬಿಡಲಾಗಿದ್ದು, ಅಲ್ಲಿ ಡಿವೈಡರ್ ಅಳವಡಿಸಲಾಗಿಲ್ಲ. ಜನರ ಒತ್ತಾಯದ ಬಳಿಕವೂ ಡಿವೈಡರ್ ಅಳವಡಿಸದೇ ಇರುವ ಕಾರಣ ಅವಗಢ ಸಂಭವಿಸಿದೆ ಎಂದು ಸ್ಥಳೀಯರು ಆಕ್ಷೇಪಿಸಿದರು. ನೂರಾರು ಜನ ಸೇರಿದ್ಶದರಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕೆಲ ಕಾಲ ಇಟ್ಟು ಪ್ರತಿಭಟನೆ ನಡೆಸಿದರು. ಡಿವೈಎಸ್ ಪಿ ವ್ಯಾಲೆಂಟೇನ್ ಡಿಸೋಜಾ ನೇತೃತ್ವದಲ್ಲಿ ಜನರನ್ನು ಚದುರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.