accident 
ಜಿಲ್ಲೆ

ಮೈಸೂರಿನಲ್ಲಿ ರಸ್ತೆ ಅಪಘಾತ : ಬೈಕ್ ಸವಾರ ಸಾವು

ಸದೇಶ್ ಕಾರ್ಮಾಡ್

ಮೈಸೂರು: ನಗರದಲ್ಲಿ ಬುಧವಾರ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಸರಗೂರು ನಿವಾಸಿ ಸಚಿನ್(27) ಮೃತರು. ನಗರದ ಡಿ. ಸುಬ್ಬಯ್ಯ ರಸ್ತೆ ಜಂಕ್ಷನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಚಿನ್ ಅವರಿಗೆ ತೀವ್ರಪೆಟ್ಟು ಬಿದ್ದು ಕೊನೆಯುಸಿರೆಳೆದರು. ಹಿಂಬದಿ ಸವಾರರಾದ ಗೌರವ್, ದೇವರಾಜ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಬುಧವಾರ ಮುಂಜಾನೆ 1ಕ್ಕೆ ಸಚಿನ್ ಹಾಗೂ ಸ್ನೇಹಿತರು ಬೈಕ್‌ನಲ್ಲಿ ಬರುತ್ತಿದ್ದ ವೇಳೆಯಲ್ಲಿ ಡಿ.ಸುಬ್ಬಯ್ಯ ರಸ್ತೆ ಜಂಕ್ಷನ್‌ನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು. ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.