- ಹುಬ್ಬಳ್ಳಿ: ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಕಠಿಣ ಪರಿಶ್ರಮ, ಅಚ್ಚುಕಟ್ಟುತನದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕರ್ಮಯೋಗಿ, ಸಮಾಜಸೇವಕ ಡಾ. ಆರ್.ಎನ್. ಶೆಟ್ಟಿ ಅವರು ಅಪಾರ ದೈವಭಕ್ತರಾಗಿದ್ದರು ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಬಣ್ಣಿಸಿದರು
- ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ -ಧಾರವಾಡ ಬಂಟರ ಸಂಘವು ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಆರ್.ಎನ್. ಶೆಟ್ಟಿ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
- ಆರ್.ಎನ್. ಶೆಟ್ಟಿ ಅವರು ಕೇವಲ ಬಂಟ ಸಮಾಜದ ಆಸ್ತಿಯಲ್ಲ. ಅವರು ಅಪ್ಪಟ ಹಿಂದುವಾಗಿದ್ದರು. ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಮುರುಡೇಶ್ವರದ ದೇವಸ್ಥಾನ ಎಲ್ಲರ ಗಮನ ಸೆಳೆಯುತ್ತದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರು ಮುರುಡೇಶ್ವರವನ್ನು ಮರೆಯಲಿಲ್ಲ ಎಂದರು.
- ನಾನು ಕೂಡ ಹಿಂದು ಆಗಿ ಹುಟ್ಟಿದ್ದಕ್ಕೆ ದೇವಾಲಯ ಕಟ್ಟುತ್ತಿದ್ದೇನೆ. ಈ ವಿಷಯದಲ್ಲಿ ಆರ್.ಎನ್. ಶೆಟ್ಟಿ ಅವರನ್ನು ಭೇಟಿ ಮಾಡಿ ಚಚಿರ್ಸಿ, ಮಾರ್ಗದರ್ಶನ ಪಡೆದಿದ್ದೆ. ಇನ್ನು ಕೆಲವೇ ತಿಂಗಳಲ್ಲಿ ವರೂರ ಬಳಿ ಬೃಹತ್ ದೇವಾಲಯ ನಿರ್ಮಾಣ ರ್ಪೂಣಗೊಳ್ಳಲಿದೆ ಎಂದು ಡಾ. ಸಂಕೇಶ್ವರ ಹೇಳಿದರು.
- ಸಮಾಜಕ್ಕೆ ನೀಡಬೇಕು: ಆರ್.ಎನ್. ಶೆಟ್ಟಿ ದತ್ತಿ ಪ್ರಶಸ್ತಿ ಸ್ವೀಕರಿಸಿದ ಮತ್ತೊಬ್ಬ ಸಾಧಕ, ಸಮಾಜಸೇವಕ, ಸಿಎ ಎಸ್.ಬಿ. ಶೆಟ್ಟಿ ಅವರು ಮಾತನಾಡಿ, ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನೆ ಮಾಡಿಕೊಳ್ಳಬೇಕು. ಸಮಾಜದ ಋಣ ತಿರಿಸಬೇಕು. ಆರ್.ಎನ್. ಶೆಟ್ಟಿ ಅವರು ಶಿಕ್ಷಣ ಪ್ರೇಮಿ, ಕೊಡುಗೈ ದಾನಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು.
- ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಬಹುದೊಡ್ಡ ಯುವಶಕ್ತಿ ಹೊಂದಿರುವ ಭಾರತ ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿಯಬೇಕಿದೆ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಇಲ್ಲಿಯವರೆಗೆ 3.5 ಲಕ್ಷ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ ದೃಷ್ಟಿ ನೀಡಿದೆ ಎಂದು ತಿಳಿಸಿದರು.
- ಧ್ವಜಾರೋಹಣ ನೆರವೇರಿಸಿದ ನಿವೃತ್ತ ಕರ್ನಲ್ ಎ.ಕೆ. ಭಂಡಾರಿ ಮಾತನಾಡಿ, ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ನಾವೆಲ್ಲ ವೀರಯೋಧರ ಸ್ಮರಣೆ ಮಾಡಬೇಕು. ಕ್ರಾಂತಿಕಾರರು ತಮ್ಮ ಸರ್ವಸ್ವ ಬಿಟ್ಟು ಹೋರಾಡಿ, ಬ್ರಿಟಿಷರ ದೌರ್ಜನ್ಯ ಸಹಿಸಿ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದಾರೆ ಎಂದರು.
ನೇತ್ರ ತಪಾಸಣೆ ಶಿಬಿರ: ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು.
ವೈದ್ಯಕಿಯ ಸಮಿತಿ ಗೌರವ ಸಂಚಾಲಕರ ಡಾ. ಕೆ. ಧನಪಾಲ ಹೆಗ್ಡೆ ಶಿಬಿರ ಸಂಯೋಜನೆ ಮಾಡಿದ್ದರು. ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಪ್ರದೀಪ ಪಕ್ಕಳ, ಸುಧೀರ ಶೆಟ್ಟಿ, ಅಶೋಕ ಶೆಟ್ಟಿ, ಬಿ.ಸಿ. ಶೆಟ್ಟಿ, ದಿನೇಶ ಶೆಟ್ಟಿ, ಡಾ. ಕೃಷ್ಣ ಪ್ರಸಾದ, ಇತರರು ಇದ್ದರು.
ಉಪಾಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಆರ್.ಎನ್. ಶೆಟ್ಟಿ ಅವರ ಸಂಸ್ಮರಣೆ ಮಾಡಿದರು. ಕಾರ್ಯದಶಿರ್ ಸತೀಶ ಶೆಟ್ಟಿ ಸ್ವಾಗತಿಸಿದರು. ರತ್ನಾಕರ ಶೆಟ್ಟಿ, ಆಶಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.