ಜಿಲ್ಲೆ

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶ್ರಮಿಸುತ್ತಿದೆ: ಜಿ ಆರ್. ಸೋನೆರ್

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮ ಮಹತ್ವರವಾಗಿದೆ ಎಂದು ಹಿರಿಯ ವಕೀಲರು, ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ಕಾನೂನು ಸಲಹೆಗಾರರು ಆದ ಜಿ. ಆರ್ ಸೋನೆರ್‌ ಹೇಳಿದರು.

ಇಲ್ಲಿನ ಹಿಂಡಲಗಾ ಗಣಪತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾನೂನಿನ ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಜತೆಗೆ ನಮ್ಮಿಂದ ಆಗುವ ಅನೇಕ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಮಹಿಳೆಯರು ಪ್ರಾಥಮಿಕ ಕಾನೂನು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜಿಲ್ಲೆಯ ನಿರ್ದೇಶಕರಾದ ಸತೀಶ ನಾಯ್ಕ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಸಮಾಜದಲ್ಲಿ ಮಹಿಳೆಯರ ಸ್ವ ಉದ್ಯೋಗ ಕಂಡುಕೊಂಡು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಬಲಿಷ್ಠವಾಗಿ ಬೆಳೆದಾಗ ಮಾತ್ರ ದೇಶ ಅಭಿವೃದ್ಧಿಯಾದಂತೆ ಎಂದರು.

ಮಹಿಳಾ ಸಬಲೀಕರಣದ ಕುರಿತಂತೆ ರಾಣಿ ಚನ್ಮಮ್ಮಾ ವಿಶ್ವ ವಿದ್ಯಾಲಯದ ಮರಾಠಿ ವಿಭಾಗದ ಉಪನ್ಯಾಸಕರಾದ ಮನಿಷಾ ರವರು ವಿಚಾರಗೊಷ್ಠೀ ಮಂಡಿಸಿದರು.

ಡ್ಯಾಪೋಡೈಲ್ಸ್ ಸಂಸ್ಥೆಯ ನಿರ್ದೇಶಕರಾದ ಪದ್ಮಜಾ ಮಿಲಿಂದ ಮುತ್ತೇಕರ ಅವರು ಮಾತನಾಡಿ, ಸ್ವ ಉದ್ಯೋಗಕ್ಕೆ ಮಹಿಳೆಯರು ಒತ್ತು ನೀಡಿದ್ದಾಗ ಕುಟುಂಬಸ್ಥರು ಪ್ರಗತಿ ಹೊಂದಲು ಸಾದ್ಯ, ಕಷ್ಟಗಳನ್ನು ಸಲಿಸಾಲಿ ನಿಬಾಸಬಹುದು. ತಮ್ಮ ಸಂಸ್ಥೆ ಮುಖೇನ ಮಹಿಳೆಯರಿಗೆ ತರಬೇತಿಗಳನ್ನು ಒದಗಿಸಿಕೊಳ್ಳುವ ಬಗ್ಗೆ ತಿಳಿಸಿದರು.

ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಸಂಗೀತಾ ರವರು ಮಾತೃಶ್ರೀ ಅಮ್ಮನವರ ಉದ್ದೇಶಗಳ ಬಗ್ಗೆ ತಿಳಿಸಿದರು.

ಶ್ರೀ ರಾಮ ಸೇನಾ ಜಿಲ್ಲಾ ಅಧ್ಯಕ್ಷರಾದ ರವಿಕುಮಾರ ಕೋಕಿತಕರ ರವರು ಮಹಿಳೆಯರಿಗೆ ಸಂಸ್ಕಾರಗಳ ಬಗ್ಗೆ ತಿಳಿಸಿದರು .

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು. ಜ್ಞಾನ ವಿಕಾಸಕೇಂದ್ರದ ಸದಸ್ಯರು ತಾಲೂಕಿನ ಸೇವಾಪ್ರತಿನಿಧಿಗಳು ವಲಯದ ಮೇಲ್ವಿಚಾರಕರಾದ ಕವಿತಾ, ಮಹಾಂತೇಶ ಹೊಸಮನಿ, ನೇತ್ರಾವತಿ ಹೆಬಸೂರ, ನಾಗಪ್ಪಗೌಡ ಇತರರು ಇದ್ದರು. ವೈಶಾಲಿ ಪಟಗಾರ ನಿರೂಪಿಸಿದರು, ಸಂಗೀತಾ ಪೂಜಾರ ವಂದಿಸಿದರು.