ಬೆಳಗಾವಿ: ನಗರದ ಜಿಎಸ್‌ಎಸ್ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಸೃಜನ್-2024 ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಶ್ರೀಜಲ್ ಜಿ., ಸಂಜನಾ ಎಸ್. ಅವರು ಮಾಸ್ಟರ್ ಮತ್ತು ಮಿಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪೇಂಟಿಂಗ್-ವಿಶ್ವಕಲಾ ಸ್ಪರ್ಧೆಯಲ್ಲಿ ವಿನಯ ಪ್ರಥಮ, ರಸಪ್ರಶ್ನೆ ಸ್ಪರ್ಧೆಯಲ್ಲಿ ಸೊಹಂ ಎಸ್., ಸೌಂದರ್ಯ ಪಿ, ಶ್ರೀಜಲ ಜಿ. ದ್ವಿತೀಯ ಸ್ಥಾನ ಗಳಿಸಿದ್ದಾರೆ. ಟ್ರಝರಹಂಟ್ ಸ್ಪರ್ಧೆಯಲ್ಲಿ ಸೂರಜ ಎಸ್., ಸ್ವರಾ ಕೆ., ಸಾಚಿ ಕೆ. ಮತ್ತು ವಿಶಾಲ ಎನ್. ಭಾಗವಹಿಸಿದ್ದರು. ನಿವೇದಿತಾ ಕೆ. ಪೇಂಟಿಂಗ್ ಸ್ಪರ್ಧೆಯಲ್ಲಿ ರಿಚರ್ಡ್ ಎಚ್., ರಿತ್ವಿಕ ಆರ್., ಚರ್ಚಾ ಸ್ಪರ್ಧೆಯಲ್ಲಿ ರಿಯಾ ಎಚ್, ಸೃಷ್ಟಿ ಜೆ., ಸ್ವರೂಪ ಪಿ, ಅರ್ಚಿತಾ ಡಿ., ದಿವ್ಯಾಂಕಾ ಎಸ್. ಭಾಗವಹಿಸಿದ್ದರು. ಪೋಟೋಗ್ರಾಫಿ ಸ್ಪರ್ಧೆಯಲ್ಲಿ ವರ್ಷಿಣಿ ಐ., ಲಕ್ಷ್ಮೀ ಎಸ್., ವರ್ಷಾ ಟಿ., ಶ್ರೀಯಾ ಎ., ಅಪೇಕ್ಷಾ ಕೆ. ಮತ್ತು ದಿವ್ಯಾನಿ ಎಸ್. ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿನ ಗೌರವಕ್ಕೆ ಪಾತ್ರರಾಗಿದ್ದಾರೆ. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸರ್ವಸದಸ್ಯರು, ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.