ಜಿಲ್ಲೆ

ವಿಶ್ವಮಟ್ಟದಲ್ಲಿ ಆರ್​ಎಲ್​ಎಸ್​ ಕಾಲೇಜ್​ ಕ್ರೀಡಾ ಸಾಧನೆ

ಬೆಳಗಾವಿ: ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಾನ ಮಹಾವಿದ್ಯಾಲಯದ ವಿದ್ಯಾರ್ಥಿ ದೇವೆನ್​ ವಿನೋದ ಬಾಮಣೆ ಸ್ಟೇಟಿಂಗ್​ನಲ್ಲಿ ವಿಶ್ವ ಚಾಂಪಿಯನ್​ಶಿಪ್​ಗೆ ಹಾಗೂ ಲತಾ ಜಂಗಟಿ ಏಷಿಯನ್​ ಡಾಡ್ಜ್​ ಬಾಲ್​ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ.

ಸೌಥ್​ ಕೊರಿಯಾದ ಜೆಕೆನ್​ಸಿ ನಗರದಲ್ಲಿ ಜರುಗಿದ ಏಷಿಯನ್​ ಗೇಮ್​ 2025 ಕ್ರೀಡಾಕೂಟದ ಸ್ಕೇಟಿಂಗ್​ನಲ್ಲಿ ದೇವೆನ್​ ಬಾಮಣೆ 9ನೇ ಸ್ಥಾನ ಪಡೆದುಕೊಂಡಿದ್ದಾನೆ. ಒಟ್ಟು 15 ರಾಷ್ಟ್ರಗಳು ಭಾಗಿಯಾಗಿದ್ದ ಈ ಪಂದ್ಯಾವಳಿಯಲ್ಲಿ ಭಾರತ ದೇಶದಿಂದ ಆಯ್ಕೆಯಾದ 3 ಸ್ಕೇರ್ಟಸ್​ಗಳಲ್ಲಿ ಒಬ್ಬನಾಗಿದ್ದಾನೆ. ಈ ಮೂಲಕ ಚೀನಾದಲ್ಲಿ ನವೆಂಬರ್​ ಮತ್ತು ಡಿಸೆಂಬರ್​ ಮಧ್ಯೆ ಆಯೋಜಿಸಿರುವ ವಿಶ್ವ ಚಾಂಪಿಯನ್​ಶಿಪ್​ನ ಸ್ಲಾ$್ಯಲೊಮ್​ (ಫ್ರೀ ಸ್ಟೆಲ್​ ಸ್ಕೇಟಿಂಗ್​) ವಿಭಾಗದಲ್ಲಿ ಆಯ್ಕೆಯಾಗಿದ್ದಾನೆ.

ಡಾಡ್ಜ್​ ಬಾಲ್​ ಫೆಡರೇಷನ್​ ಆಫ್​ ಇಂಡಿಯಾ ವತಿಯಿಂದ ಆಯೋಜಿಸಿದ್ದ ಡಾಡ್ಜ್​ ಚಾಂಪಿಯನ್​ ಶಿಪ್​ನಲ್ಲಿ ಲತಾ ಜಂಗಟಿ ಅತ್ಯುತ್ತಮ ಪ್ರದರ್ಶನ ನೀಡಿ, ಜಪಾನಿನ ಚೀಬಾ ನಗರದಲ್ಲಿ ಸೆ.27 ಹಾಗೂ 28ರಂದು ಜರುಗಲಿರುವ ಏಷಿಯನ್​ ಡಾಡ್ಜ್​ ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾಳೆ.

ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ಕೆಎಲ್​ಇ ಸಂಸ್ಥೆ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಹಾಗೂ ಸರ್ವ ಸದಸ್ಯರು, ಆಜೀವ ಸದಸ್ಯರು, ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯ ಮತ್ತು ಸದಸ್ಯರು, ಪ್ರಾಚಾರ್ಯ ವಿ.ಸಿ. ಕಾಮಗೋಳ, ಉಪಪ್ರಾಚಾರ್ಯರು, ಬೋಧಕ& ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.