ಜಿಲ್ಲೆ

ಆರ್​ಜೆ ಮಹಿಗೆ ಚಿನ್ನದ ಪುರಸ್ಕಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಭಾರತದ ರೇಡಿಯೋ ಉದ್ಯಮದ ಇ 4 ಎಂ ಗೋಲ್ಡನ್ ಮೈಕ್ಸ್-2025 ಕಾರ್ಯಕ್ರಮದಲ್ಲಿ ಕರ್ನಾಟಕದ ಆರ್​ಜೆ ಮಹಿ (ಮಹೇಶ ಸುಭಾಷ ನೇತ್ರೇಕರ) ಅವರು ಜನಪ್ರಿಯ ಪ್ರಾಂಕ್ ಶೋ ‘ಮಿರ್ಚಿಗೋಲ್​ಮಾಲ್​’ಗಾಗಿ ‘ಬೆಸ್ಟ್ ಹ್ಯೂಮರ್ ಆನ್ ರೇಡಿಯೋ’ ವಿಭಾಗದಲ್ಲಿ ಚಿನ್ನದ ಪುರಸ್ಕಾರ ಪಡೆದಿದ್ದಾರೆ.

2016ರಲ್ಲಿ ಮೈಸೂರು ಮತ್ತು ಹುಬ್ಬಳ್ಳಿಯಂತಹ 2ನೇ ಸ್ತರದ ನಗರಗಳಿಂದ ತಮ್ಮ ರೇಡಿಯೋ ಪ್ರಯಾಣ ಆರಂಭಿಸಿದ ಮಹಿ, ಉತ್ತರ ಕರ್ನಾಟಕದಲ್ಲಿ ಲೈವ್ ಶೋ ನಡೆಸಿದ ಮೊದಲ ರೇಡಿಯೋ ಜಾಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

98.3 ಮಿರ್ಚಿ ಬೆಂಗಳೂರು ಜತೆಗೆ ಸೇರಿಕೊಂಡು ಕೇವಲ ಒಂದು ವರ್ಷದಲ್ಲಿ ರಾಷ್ಟ್ರಮಟ್ಟದ ಈ ಪುರಸ್ಕಾರ ಜಯಿಸಿದ್ದಾರೆ. ರೆಡಿಯೋಗೂ ಮುಂಚೆ ಅವರು ಟೆಲಿವಿಷನ್ ಮತ್ತು ಸಿನಿಮಾ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆ ತೋರಿಸಿದ್ದರು. ಅವರ ಶೋ ನಿತ್ಯ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 98.3 ಮಿರ್ಚಿ ಬೆಂಗಳೂರು ಸ್ಟೇಶನ್​ನಲ್ಲಿ ಹಾಗೂ 104.8 ಮೈಸೂರಿನಲ್ಲಿ ಲೈವ್ ಆಗಿ ಕೇಳಬಹುದು. ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಹುಬ್ಬಳ್ಳಿಯಲ್ಲಿಯೂ ಕೇಳಬಹುದು.