ಎಸ್‌ಸಿಎಸ್ ಪ್ರಿಸ್ಕೂಲ್‌ಗಳ ವತಿಯಿಂದ 77ನೇ ಸ್ವಾತಂತ್ರ್ಯ ದಿನವನ್ನು ರಿವರ್‌ಸೈಡ್ ಕ್ಯಾಂಪಸ್ ಉರ್ವಾದಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಸ್ಕಿಟ್‌ಗಳು ಮತ್ತು ಡ್ರಿಲ್‌ಗಳನ್ನು ಒಳಗೊಂಡಿರುವ ವರ್ಣರಂಜಿತ ಕಾರ್ಯಕ್ರಮವನ್ನು ಪ್ರದರ್ಶಿಸಿದರು. 
ಜಿಲ್ಲೆ

ಎಸ್‌ಸಿಎಸ್ ಪ್ರಿಸ್ಕೂಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Mangaluru - Shravan Kumar Nala

ಮಂಗಳೂರು: ಎಸ್‌ಸಿಎಸ್ ಪ್ರಿಸ್ಕೂಲ್‌ಗಳ ವತಿಯಿಂದ 77ನೇ ಸ್ವಾತಂತ್ರ್ಯ ದಿನವನ್ನು ರಿವರ್‌ಸೈಡ್ ಕ್ಯಾಂಪಸ್ ಉರ್ವಾದಲ್ಲಿ ಆಚರಿಸಲಾಯಿತು.

ಎಸ್‌ಸಿಎಸ್ ಪ್ರಿಸ್ಕೂಲ್ ಉರ್ವಾ, ಬಿಕರ್ನಕಟ್ಟಾ ಮತ್ತು ಕಣ್ಣೂರು ಪಡೀಲ್‌ನ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಸ್ಕಿಟ್‌ಗಳು ಮತ್ತು ಡ್ರಿಲ್‌ಗಳನ್ನು ಒಳಗೊಂಡಿರುವ ವರ್ಣರಂಜಿತ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ಶ್ಲಾಗ್ಯಾ ಅವರು ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ಮಾತನಾಡಿದರು. ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಅಭಿನಯ ಸೊರಕೆ ಮುಖ್ಯ ಅತಿಥಿಯಾಗಿದ್ದರು. ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಆಡಳಿತಾಧಿಕಾರಿ ಯು ಕೆ ಖಾಲಿದ್, ಎಸ್‌ಸಿಎಸ್ ಪ್ರಿಸ್ಕೂಲ್‌ಗಳ ಪ್ರಾಂಶುಪಾಲೆ ವಿನಯ ಡಿ ಸೋಝ ಮತ್ತು ಇತರ ಸಂಸ್ಥೆಗಳ ಪ್ರಾಂಶುಪಾಲರುಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.