ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ನಿಪ್ಪಾಣಿ ತಾಲೂಕಿನ 5 ಕೆಳ ಹಂತದ ಸೇತುವೆಗಳು ಭಾನುವಾರ ಜಲಾವೃತಗೊಂಡಿವೆ.
ಮಹಾರಾಷ್ಟ್ರದ ಪಶ್ಚಿಮ ಟ್ಟ ಪ್ರದೇಶ ಧಾರಾಕಾರ ಮಳೆಯಿಂದ ವೇದಗಂಗಾ ನದಿಗೆ ಅಪಾರ ನೀರು ಹರಿದು ಬರುತ್ತಿರುವ ಕಾರಣ ನಿಪ್ಪಾಣಿ ತಾಲೂಕಿನ 5 ಕೆಳ ಹಂತದ ಸೇತುವೆಗಳು ಭಾನುವಾರ ಜಲಾವೃತಗೊಂಡಿವೆ. ವೇದಗಂಗಾ ನದಿಗೆ ನಿರ್ಮಿಸಿರುವ ಕಾರದಗಾ&ಭೋಜ, ಭೋಜವಾಡಿ&ಕುನ್ನೂರ, ಸಿದ್ನಾಳ ಅಕ್ಕೋಳ, ಹುನ್ನರಗಿ&ಮಮದಾಪುರ, ಕುನ್ನೂರ&ಬಾರವಾಡ ಹಾಗೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಾವನಸೌಂದತ್ತಿ&ಮಾಂಜರಿ ಸೇತುವೆಗಳು ಮುಳುಗಡೆಯಾಗಿವೆ. ಜನರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.
ಮೂರು ಅಡಿ ಏರಿಕೆ: ಕಳೆದ ಎರಡು ದಿನದಿಂದ ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯ ಶೇ.80ರಷ್ಟು ಭರ್ತಿಯಾಗಿದೆ. ಜಲಾಶಯದಿಂದ 23 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ರಾಜಾಪೂರ ಬ್ಯಾರೇಜ್ದಿಂದ ಕೃಷ್ಣಾ ನದಿಗೆ ಒಟ್ಟು 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ನದಿ ನೀರಿನ ಮಟ್ಟ ಮೂರು ಅಡಿ ಹೆಚ್ಚಳವಾಗಿದೆ.
ಹಿಡಕಲ್ಲ ಜಲಾಶಯ ಶೇ.92 ಭರ್ತಿ: ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಶನಿವಾರದ ವೇಳೆಗೆ 52 ಟಿಎಂಸಿ ಸಾಮರ್ಥ್ಯದ ಜಲಾಶಯ ಶೇ.92 ರಷ್ಟು ಭರ್ತಿಯಾಗಿದೆ. ಪರಿಣಾಮ ಮುಂಜಾಗ್ರತ ಕ್ರಮವಾಗಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ. ಟಪ್ರಭಾ ಮತ್ತು ಹಿರಣ್ಯಕೇಶಿ ನದಿ ಪಾತ್ರದ ಜನರಿಗೆ ಜನ ಜಾನುವಾರ ಸಮೇತ ಸುರತ ಸ್ಥಳಕ್ಕೆ ತೆರಳುವಂತೆ ತಾಲೂಕಾಡಳಿತ ಸೂಚಿಸಿದೆ.