ಜಿಲ್ಲೆ

ನದಿ ನೀರು ಹಂಚಿಕೆ ವಿವಾದ ಹೆಚ್ಚಳ

Davangere - Desk - Mahesh Babu E

ಚಿತ್ರದುರ್ಗ: ಅಂತಾರಾಜ್ಯ ನದಿ ವಿವಾದದ ಕಾನೂನು ಜಾರಿ ಬಳಿಕ ನೀರು ಹಂಚಿಕೆ ವಿವಾದಗಳು ಬಗೆ ಹರಿಯುವ ಬದಲು ಹೆಚ್ಚಾಗುತ್ತಿವೆ. ಅರ್ಜಿ ಕೊಟ್ಟರೆ ಟ್ರಿಬ್ಯುನಲ್ ರಚನೆ ಮಾಡಬೇಕಾಗುತ್ತದೆ. ಆಗ ಮಾತುಕತೆ ಸಾಧ್ಯವಾಗದು. ಪ್ರಾಧಿಕಾರಗಳ ವಿಚಾರಣೆ 20-55 ವರ್ಷಗಳಾದರೂ ಪೂರ್ಣವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ‘ಕೋರ್ಟ್‌ನ ಕಟಕಟೆಯಲ್ಲಿ ಜಂಗಮ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಪ್ಯಾಟ್ರನ್ ಬದಲಾಗುತ್ತಿದೆ. ಕುಡಿಯುವ, ಬಳಸುವ ನೀರು ಪೂರೈಕೆಯಲ್ಲಿ ಗೊಂದಲವಿದೆ. ಕೃಷಿ, ಕೈಗಾರಿಕೆಗೆ ವಿತರಿಸುವ ನೀರಿನಲ್ಲೂ ಸಂಘರ್ಷವಿದೆ. ಆದ್ದರಿಂದ ರಿವರ್ ಬೇಸ್ಡ್ ಡೆವಲೆಪ್‌ಮೆಂಟ್ ಆಕ್ಟ್ ಜಾರಿಗೆ ಕೇಂದ್ರ ತ್ವರಿತವಾಗಿ ನಿರ್ಧರಿಸಿದರೆ ಕರ್ನಾಟಕಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಹೇಳಿದರು.