ವಿದ್ಯಾರ್ಥಿ ನಿಧಿ ಸಮಾವೇಶದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸ್ವಯಂ ಸೇವಕರನ್ನು ಸನ್ಮಾನಿಸಿದರು.  
ಜಿಲ್ಲೆ

ಆಚರಣೆಗಳು ಜೀವನದ ಮೂಲನಿಯಮ

ವಿದ್ಯಾರ್ಥಿ ನಿಧಿ ಸಮಾವೇಶದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸ್ವಯಂ ಸೇವಕರನ್ನು ಸನ್ಮಾನಿಸಿದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಮತ ಮುದ್ದೇನಹಳ್ಳಿ ನವರಾತ್ರಿ ಸಂಭ್ರಮ



ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಆವರಣದಲ್ಲಿನ ಯಾಗ ಶಾಲೆಯಲ್ಲಿ ನವರಾತ್ರಿ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ದುರ್ಗಾಪೂಜೆ, ಪವವಾನ ಹೋಮ ಮತ್ತು ಆಶ್ಲೇಷ ಬಲಿ ಹೋಮ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಪಶ್ಚಿಮ ಬಂಗಾಳದ ದುರ್ಗಾ ಮಾತೆಯ ಅರ್ಚಕರು ದೀಪ ಧೂಪ ಗಂಧ, ಛತ್ರ ಚಾಮರ, ಗಾನ ಗಾಯನ, ಸ್ತುತಿ, ಸ್ವಸ್ತಿಗಳ ಸಹಿತ ದೇವರನ್ನು ಪೂಜಿಸಿದರು. ಜಾಗಟೆ, ಶಂಖದ ನಾದಗಳನ್ನು ಮೊಳಗಿಸಿ ಉಪಾಸನೆಗೈದರು. ಭಾವಪರವಶವಾಗಿ ನತ್ಯಾರತಿ ಮಾಡಿ, ಭಕ್ತಿ ಸಮರ್ಪಿಸಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಉತ್ತಮ ಜೀವನ ನಿರ್ವಹಣೆಗೆ ಭದ್ರ ಬುನಾದಿ ಇರಬೇಕು. ಭಾರತೀಯ ಪರಂಪರೆಯ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸತ್ವವು ಸರ್ವಕಾಲಕ್ಕೂ ಎಲ್ಲ ಧರ್ಮಗಳಿಗೂ ಅನುಕರಣೆಗೆ ಯೋಗ್ಯ. ಸಮಂಜಸವಾದ ನೀತಿಸಂಹಿತೆಯಾಗಿದೆ ಎಂದರು. ಕಲೆ ಮತ್ತು ಸಂಸ್ಕೃತಿ, ಸಂಪ್ರದಾಯ ಆಚರಣೆಗಳು ಜೀವನದ ಮೂಲ ನಿಯಮಗಳು. ಇವುಗಳ ನಂಬಿಕೆ ಮತ್ತು ವಿಶ್ವಾಸಗಳಿಗೆ ಶರಣಾಗುವುದರಿಂದ ಅರ್ಥಪೂರ್ಣವಾದ ಬದುಕಿಗೆ ನಾಂದಿ ಹಾಡಬಹುದು ಎಂದು ತಿಳಿಸಿದರು. ವ್ಯಕ್ತಿಗಳ ನಡೆ ನುಡಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ದುಷ್ಕಾರ್ಯಗಳು ಮನುಷ್ಯನಲ್ಲಿ ರಾಕ್ಷಸಿ ಪ್ರವತ್ತಿಯನ್ನು ಹೆಚ್ಚಿಸುತ್ತವೆ. ದೈವೀ ಗುಣಗಳು ದಿವ್ಯತ್ವಕ್ಕೆ ಏರಲು ಸಹಕರಿಸುತ್ತವೆ. ಜಗತ್ತು ಸದಾ ಶಾಂತಿ ಮತ್ತು ನೆಮ್ಮದಿಯ ಹಾದಿಯಲ್ಲಿ ನಡೆಯಬೇಕು. ಆಗ ಮಾತ್ರ ಪ್ರಜೆಗಳು ಸುಖ ಮತ್ತು ಸಂತಪ್ತಿಯನ್ನು ಹೊಂದಿರುತ್ತಾರೆ ಎಂದರು.
ಸತ್ಯಸಾಯಿ ಮಾನವ ಅಭ್ಯುದಯ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮತ್ತಿತರರು ಇದ್ದರು. ವಿದ್ಯಾರ್ಥಿ ನಿಧಿಯಡಿ ರಾಜ್ಯದ 31 ಜಿಲ್ಲೆಗಳಲ್ಲಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ 7800 ವಿದ್ಯಾರ್ಥಿಗಳು ಪ್ರತಿ ತಿಂಗಳು ವಿದ್ಯಾರ್ಥಿ ವೇತನ ಪಡೆಯುತ್ತಿದ್ದು ಇದು ಅವರ ಶಿಕ್ಷಣಕ್ಕೆ ವಿನಿಯೋಗವಾಗುತ್ತಿದೆ. ವಿದ್ಯಾರ್ಥಿಗಳ ವಿದ್ಯಾ ಪ್ರಗತಿ, ಹಾಜರಾತಿ ಹಾಗೂ ಅಭ್ಯುದಯದ ಪ್ರಗತಿಯನ್ನು ಅವಲೋಕಿಸಲಾಗುತ್ತಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ನಿಧಿ ಸವಾವೇಶ
ಸತ್ಯಸಾಯಿ ಪ್ರೇವಾಮತಂ ಸಭಾ ಭವನದಲ್ಲಿ ರಾಷ್ಟ್ರೀಯ ಸೇವಾ ಭಾರತಿ ವಿದ್ಯಾರ್ಥಿ ನಿಧಿ ಸವಾವೇಶ ನಡೆಯಿತು. ಕರೋನಾ ಮಹಾವಾರಿಯ ಹೊಡೆತಕ್ಕೆ ತತ್ತರಿಸಿ ಅದೆಷ್ಟೋ ಮಕ್ಕಳು ಸರ್ವಸ್ವವನ್ನು ಕಳೆದುಕೊಂಡು ಶಿಕ್ಷಣದಿಂದ ದೂರ ಉಳಿಯುವಂತಾಯಿತು. ಇಂತಹವರಿಗೆ ಪುನರ್ ವಸತಿ ಕಲ್ಪಿಸುವ ದಷ್ಟಿಯಿಂದ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿದ್ದು ಮಕ್ಕಳು ಮರಳಿ ಶಾಲೆಗೆ ಸೇರುವ ಅಭಿಯಾನಕ್ಕೆ ಮುನ್ನುಡಿ ಬರೆಯಲಾಗಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂ ಹಾಗೂ ರಾಷ್ಟ್ರೀಯ ಸೇವಾ ಭಾರತಿ ಕೈಜೋಡಿಸಿದೆ. ಸಮಾವೇಶದಲ್ಲಿ ಮುಕುಂದ, ಪನ್ನಾಲಾಲ್ ಬನ್ಸಾಲ್, ರೇಣು ಪಾಠಕ್, ದಕ್ಷಿಣ ಭಾರತ ರಾಷ್ಟ್ರೀಯ ಸ್ವಯಂಸೇವಕ ಪ್ರಾಂತ ಪ್ರಚಾರಕ ಸುಧೀರ್ ಮತ್ತಿತರರು ಇದ್ದರು.