ಜಿಲ್ಲೆ

ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗ ನೀರುಪಾಲು, ಇಬ್ಬರ ರಕ್ಷಣೆ

Uttara Kannada - Subash Hegde

ಭಟ್ಕಳ: ಮುರ್ಡೇಶ್ವರ ಕಡಲಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗನೋರ್ವ ಸೋಮವಾರ ನೀರು ಪಾಲಾಗಿದ್ದು, ಇಬ್ಬರನ್ನು ಲೈಫ್‌ಗಾರ್ಡ್ಗಳು ರಕ್ಷಣೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂತೋಷ ಹುಲಿಗುಂಡೆ ನಾಪತ್ತೆಯಾದ ವ್ಯಕ್ತಿ, ಹಸನ್ ಮಜಗಿಗೌಡ ಹಾಗೂ ಸಂಜೀವ ಹೆಬ್ಬಳ್ಳಿ ಎಂಬುವವರನ್ನು ರಕ್ಷಿಸಲಾಗಿದೆ. 22 ಜನ ಸ್ನೇಹಿತರ ತಂಡ ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಆಗಮಿಸಿತ್ತು. ಪ್ರವಾಸಿಗರು ಸಮುದ್ರಕ್ಕೆ ಇಳಿದಿದ್ದರು. ಅಬ್ಬರದ ಅಲೆಗಳಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಫ್‌ಗಾರ್ಡ್ಗಳ ಮೇಲೆ ಹಲ್ಲೆ:
ಚಂಡ ಮಾರುತ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ, ಪ್ರವಾಸಿಗರು ಲೈಫ್‌ಗಾರ್ಡ್ಗಳ ಮಾತು ಕೇಳದೇ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಅವರನ್ನು ತಡೆಯಲು ಹೋದರೆ ಲೈಫ್‌ಗಾರ್ಡ್ಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. `ನಮ್ಮಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕಡಲ ತೀರಗಳಿಗೆ ಮಳೆಗಾಲದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು ಎಂದು ಲೈಫ್‌ಗಾರ್ಡ್ಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.