ಸಿಂಧನೂರು ತಾಲೂಕಿನ ಗೋನ್ವಾರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದರೂ, ಅಪಾಯ ಲೆಕ್ಕಿಸದೆ ಬೈಕ್ ಓಡಿಸುತ್ತಿರುವುದು.  
ಜಿಲ್ಲೆ

ಅಪಾಯ ಲೆಕ್ಕಿಸದೆ ಬೈಕ್ ಓಡಿಸಿದ ಯುವರಕು

ರುದ್ರಪ್ಪ ವಾಲಿ

ಸಿಂಧನೂರು: ತಾಲೂಕಿನ ಗೋನ್ವಾರ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಯಿಂದ ಹಳ್ಳ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದರೂ, ಪ್ರಾಣವನ್ನು ಲೆಕ್ಕಿಸದೆ ಯುವಕರು ಬೈಕ್ ಓಡಿಸಿದರು.

ಸೋಮವಾರ ಮತ್ತು ಮಂಗಳವಾರ ಹೆಚ್ಚಿನ ಮಳೆ ಆಗಿದ್ದರಿಂದ ಗ್ರಾಮದ ಹತ್ತಿರ ಹಳ್ಳ ತುಂಬಿ ಹರಿದಿದೆ. ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರೂ, ಯುವಕರು ಅದರ ಮೇಲೆ ಬೈಕ್ ಓಡಿಸಿದ್ದಾರೆ. ಜನರು ಹಾಗೂ ಸ್ಕೂಲ್ ಬಸ್ ಕೂಡ ಈ ಮಾರ್ಗವಾಗಿ ಓಡಾಡಿದೆ.