ಕನಕಗಿರಿಯ ಕೆಪಿಎಸ್‌ನಲ್ಲಿ ರೈಜಿಂಗ್ ಸ್ಟಾರ್ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯಶಿಕ್ಷಕ ತುಳಜಾ ನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಂಶಾದ್ ಬೇಗಂ, ನಿರ್ದೇಶಕ ರವಿ ಸಜ್ಜನ್, ಶಿಕ್ಷಕರಾದ ಜ್ಯೋತಿ, ಹುಸೇನಬೀ ಇತರರಿದ್ದರು. 
ಜಿಲ್ಲೆ

ಇಂಗ್ಲಿಷ್ ಕಲಿಕೆಗೆ ರೈಜಿಂಗ್ ಸ್ಟಾರ್ ಫೆಸ್ಟ್ ಸಹಕಾರಿ

ಗಾಯತ್ರಿ ಮಾಲಿಪಾಟೀಲ್

ಕನಕಗಿರಿ: ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯನ್ನು ಸರಳವಾಗಿಸಲು ಕೆಪಿಎಸ್ 1 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ರೈಜಿಂಗ್ ಸ್ಟಾರ್ ಇಂಗ್ಲೀಷ್ ಫೆಸ್ಟ್ ಎನ್ನುವ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಚಾರ್ಯ ಜಗದೀಶ ಹಾದಿಮನಿ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈಜಿಂಗ್ ಸ್ಟಾರ್ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಗ್ಲೀಷ್ ಅಕ್ಷರಗಳನ್ನು ಜೋಡಿಸಿ ಓದುವುದು, ಬಣ್ಣದ ಹಾಳೆಗಳಿಂದ ವಿವಿಧ ಹೂಗಳನ್ನು ತಯಾರಿಸುವುದು, ಪ್ರಾಣಿ, ಪಕ್ಷಿಗಳ ಆಕಾರ ಕಟಿಂಗ್ ಮಾಡಿರುವುದು, ಬಣ್ಣದ ಹಾಳೆಗಳಿಂದ ಹೂಗುಚ್ಛ ಸಿದ್ಧಪಡಿಸಿರುವುದು ಆಂಗ್ಲ ಭಾಷೆ ಸರಳವಾಗಿ ಕಲಿಯಲು ವಿನೂತನ ಪ್ರಯತ್ನವಾಗಿದೆ ಎಂದರು.

ಶಿಕ್ಷಕಿ ವಿಮಲಾಬಾಯಿ ಮಾತನಾಡಿ, ನಿರುಪಯುಕ್ತ ಬಣ್ಣದ ಹಾಳೆಗಳನ್ನು ಬಳಸಿಕೊಂಡು ವಿವಿಧ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಿಕ್ಷಕರು 30 ದಿನಗಳ ಕಾಲ ಶ್ರಮಿಸಿದ್ದಾರೆ. ಮಕ್ಕಳಲ್ಲಿ ಇಂಗ್ಲೀಷ್ ಸರಳೀಕರಣಗೊಳಿಸಲು ಉತ್ತಮ ಪ್ರಯತ್ನವಾಗಿದೆ ಎಂದರು.

ಮುಖ್ಯಶಿಕ್ಷಕ ತುಳಜಾ ನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಶಂಶಾದ್ ಬೇಗಂ, ನಿರ್ದೇಶಕ ರವಿ ಸಜ್ಜನ್, ಶಿಕ್ಷಕರಾದ ಜ್ಯೋತಿ, ಹುಸೇನ ಬೀ, ರೂಪಾ, ಸಾವಿತ್ರಿ, ರೇಣುಕಾ, ಶ್ರುತಿ, ಶಾಮೀದ್ ಬೀ, ನಂದಿನಿ, ಸೌಮ್ಯಾ, ಜ್ಯೋತಿ ಹಿರೇಮಠ, ಸುರೇಖಾ ಇತರರಿದ್ದರು.