ಬೆಂಗಳೂರು: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ(Rishi Sunak & Akshata Murty) ಅವರೊಂದಿಗೆ ಬೆಂಗಳೂರಿನ ಜಯನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಪ್ರಸ್ತುತ ಕಾರ್ತಿಕ ಮಾಸವಿದ್ದು ಇದನ್ನು ಮಂಗಳಕರ ಮಾಸ ಎಂದು ನಂಬಲಾಗಿದೆ. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯಲು ಬುಧವಾರ(ನವೆಂಬರ್ 6) ಮಠಕ್ಕೆ ಭೇಟಿ ನೀಡಿದರು.
ಇದನ್ನು ಓದಿ: ದುಬೈ ನಿವಾಸದಲ್ಲಿ ವಿವೇಕ್ ಒಬೆರಾಯ್ ದೀಪಾವಳಿ ಸಂಭ್ರಮ; Viral Video ನೋಡಿ ನೆಟ್ಟಿಗರು ಹೇಳಿದ್ದೀಗೆ..
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಜತೆಗೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಕೂಡ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲೂ ಪಾಲ್ಗೊಂಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕುಟುಂಬವು ಒಟ್ಟಿಗೆ ಆರತಿಗೆ ಹಾಜರಾಗುವುದನ್ನು ನೋಡಬಹುದು.
ಅಕ್ಷತಾ ಈ ವರ್ಷದ ಫೆಬ್ರವರಿಯಲ್ಲಿ ಬ್ರಿಟನ್‌ನ ಪ್ರಥಮ ಮಹಿಳೆಯಾಗಿದ್ದಾಗ ತಮ್ಮ ಪಾಲಕರು ಮತ್ತು ಪುತ್ರಿಯರಾದ ಅನುಷ್ಕಾ ಮತ್ತು ಕೃಷ್ಣ ಅವರೊಂದಿಗೆ ಮಠಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ರಿಷಿ ಸುನಕ್ ಅವರು ಭಾರತೀಯ ಸಂಪ್ರದಾಯಗಳಲ್ಲಿ ತಮ್ಮ ನಂಬಿಕೆಯ ಬಗ್ಗೆ ಯಾವಾಗಲೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ವರ್ಷದ ಜನವರಿಯಲ್ಲಿ ಸುನಕ್ ಲಂಡನ್‌ನ ಐಕಾನಿಕ್ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದ್ದರು.
ಹಿಂದೂ ಮೂಲದ ಮೊದಲ ಬ್ರಿಟಿನ್ ಪ್ರಧಾನಿ ಆದವರು ರಿಷಿ ಸುನಕ್. ಅವರು ತಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ನನ್ನ ಭಾರತೀಯ ಬೇರುಗಳು ಮತ್ತು ಭಾರತದೊಂದಿಗಿನ ನನ್ನ ಸಂಪರ್ಕಗಳ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಹೆಮ್ಮೆಯ ಹಿಂದೂ ಎಂದರೆ ನಾನು ಯಾವಾಗಲೂ ಭಾರತ ಮತ್ತು ಭಾರತದ ಜನರೊಂದಿಗೆ ಸಂಪರ್ಕವನ್ನು ಹೊಂದಿರುತ್ತೇನೆ ಎಂದು ಹಿಂದೊಮ್ಮೆ ಸುನಕ್ ಹೇಳಿದ್ದರು. (ಏಜೆನ್ಸೀಸ್)