ಜಿಲ್ಲೆ

ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಆಟಿದ ನೆಂಪು

reportermng

ಮಂಗಳೂರು: ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಮುಲ್ಲಕಾಡು ಪ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಆಟಿದ ನೆಂಪು ಕಾರ್ಯಕ್ರಮ ಪ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಸಮಾಜ ಸೇವಕಿ, ಕಾವೂರುಗುತ್ತಿನ ಗಿರಿಜಾತೆ ಆರ್.ಭಂಡಾರಿ ಉದ್ಘಾಟಿಸಿ, ಆಧುನಿಕತೆಯ ಭರಾಟೆಯಲ್ಲಿ ಹಲವು ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿದ್ದೆ. ಆದರೂ ಕೆಲವೊಂದು ಆಚರಣೆಗಳು ಇಂದಿಗೂ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ತುಳುನಾಡಿನ ಆಚರಣೆ ಆರಾಧನೆಗಳಿಗೆ ಅದರದ್ದೇ ಆದ ವೈಶಿಷ್ಟ್ಯ, ಮಹತ್ವವಿದ್ದು, ಅದರ ಹಿಂದೆ ವೈಜ್ಞಾನಿಕತೆ ಅಡಗಿದೆೆ ಎಂದರು.
ರಿಷಿ ಪ್ರತಿಷ್ಠಾನ ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ವಿಶ್ವನಾಥ ಪಂಜಿಮೊಗರು, ಇಂದು ಆಟಿಕೂಟ, ಆಟಿಯ ಆಚರಣೆಗಳು ಅಲ್ಲಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಾಗಿ ಹಿರಿಯರು ಪಾಲಿಸಿಕೊಂಡು ಬಂದಿರುವ ಆಟಿಯ ದಿನಗಳು, ಅವುಗಳ ವೈಜ್ಞಾನಿಕತೆಯ ಬಗ್ಗೆ ಇಂದಿನ ಪೀಳಿಗೆಗೂ ದಾಟಿಸುವ ಅಗತ್ಯತೆಯಿದೆ ಎಂದು ಹೇಳಿದರು.
ಯಕ್ಷಗಾನ ಭಾಗವತೆ ಭವ್ಯಶ್ರೀ ಕುಲ್ಕುಂದ, ಮಾಜಿ ಮನಪಾ ಕಾರ್ಪೊರೇಟರ್ ದೀಪಕ್ ಪೂಜಾರಿ, ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಜನಾರ್ದನ ಶೆಟ್ಟಿಗಾರ್, ಸ್ತ್ರೀ ಶಕ್ತಿ ಸಂಘದ ಸದಸ್ಯೆ ವನಿತಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ರಿಷಿ ಪ್ರತಿಷ್ಠಾನದ ಅಧ್ಯಕ್ಷ ಅವಿನಾಶ್ ಕುಲಾಲ್, ಸ್ಥಾಪಕಾಧ್ಯಕ್ಷ ದಿವಾಕರ್ ಪದ್ಮುಂಜ, ಕೀರ್ತನಾ ಕುಲಾಲ್ ಉಪಸ್ಥಿತಿರಿದ್ದರು. ವಿದ್ಯಾಶ್ರೀ ಎ.ಎಸ್. ಕಾರ್ಯಕ್ರಮ ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷ ವಿಶ್ವನಾಥ ಪದ್ಮುಂಜ ಸ್ವಾಗತಿಸಿದರು. ರಿಷಿ ಕಲಾ ಕೇಂದ್ರದ ಸಂಚಾಲಕಿ ದೇವಿಕಾ ಸುಳ್ಯ ವಂದಿಸಿದರು.
ಬಳಿಕ ರಿಷಿ ಕಲಾಕೇಂದ್ರದ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿ ತಾವೇ ತಯಾರಿಸಿದ ಸುಮಾರು 25ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ಉಣಬಡಿಸಿದರು. ತುಳುನಾಡಿನ ಹಳೇ ಪಾರಂಪರಿಕ ವಸ್ತು ಪರಿಕರಗಳ ಪ್ರದರ್ಶನ ಗಮನಸೆಳೆಯಿತು.