ಜಿಲ್ಲೆ

ಕೊಲ್ಲೂರು ದೇವಳಕ್ಕೆ ರಿಷಬ್ ಶೆಟ್ಟಿ

Dakshina Kannada

ಕೊಲ್ಲೂರು: ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಸೋಮವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಳದ ತಂತ್ರಿ ಹಾಗೂ ಪ್ರಧಾನ ಅರ್ಚಕ ಡಾ.ರಾಮಚಂದ್ರ ಅಡಿಗ ದಂಪತಿಗೆ ದೇವರ ಪ್ರಸಾದ ನೀಡಿ ಆಶೀರ್ವದಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ಮೊದಲಾದವರು ಇದ್ದರು.