ಜಿಲ್ಲೆ

ದಾಂಪತ್ಯದಲ್ಲಿ ಎಲ್ಲ ಸೀನ್​ಗಳೂ ಇರ್ತವೆ, ಆದ್ರೆ ಆ್ಯಕ್ಷನ್​-ಕಟ್ ಇರಲ್ಲ...: ನಟ ರಿಷಬ್​ ಶೆಟ್ಟಿ

Webdesk - Ravikanth

ಬೆಂಗಳೂರು: ನಟ-ನಿರ್ದೇಶಕ ಮಾತ್ರವಲ್ಲ, ನಿರ್ಮಾಪಕ ಕೂಡ ಆಗಿರುವ ರಿಷಬ್​ ಶೆಟ್ಟಿ ತಾವು 'ಎಲ್ಲೂ ಎಂದೂ ಅಭಿನಯಿಸಲಿಲ್ಲ..' ಎಂಬುದಾಗಿ ಹೇಳಿಕೊಂಡಿದ್ದಾರೆ. ಹಾಗಂತ ಅವರು ಹೇಳಿಕೊಂಡಿರುವುದು ಯಾವುದೋ ಸಿನಿಮಾ ಕುರಿತಲ್ಲ. ಅಸಲಿಗೆ ಅದು ರೀಲ್ ವಿಚಾರವೇ ಅಲ್ಲ, ಬದಲಿಗೆ ರಿಯಲ್ ವಿಷಯ.

ವಿಷಯ ಏನೆಂದರೆ, ನಟ ರಿಷಬ್ ಶೆಟ್ಟಿ ತಮ್ಮ ಮದುವೆ ವಾರ್ಷಿಕೋತ್ಸವದ ಸಂಗತಿಯನ್ನು ವಿಭಿನ್ನವಾಗಿ ಸಿನಿಮಾಶೈಲಿಯಲ್ಲೇ ಹೇಳಿಕೊಂಡಿದ್ದಾರೆ. ಆ ಮೂಲಕ ತಮ್ಮ ಪತ್ನಿ ಪ್ರಗತಿಗೆ ಪ್ರೀತಿ ವ್ಯಕ್ತಪಡಿಸುತ್ತ, ದಾಂಪತ್ಯದಲ್ಲಿ ಸಿಕ್ಸರ್ ಬಾರಿಸಿದ ಖುಷಿ ಹಂಚಿಕೊಂಡಿದ್ದಾರೆ.

'ದಾಂಪತ್ಯದಲ್ಲಿ ಆಕ್ಷನ್-ಕಟ್​ಗಳು ಇರುವುದಿಲ್ಲ. ಪ್ರೀತಿಸಿದ ಹುಡುಗಿಯ ಕೊರಳಿಗೆ ತಾಳಿ ಕಟ್ಟಿದಾಗಿನಿಂದ ಶುರುವಾದ ನಮ್ಮ ದಾಂಪತ್ಯದ ಸಿಂಗಲ್ ಟೇಕ್​​ಗೆ ಈಗ ಆರು ಸಾರ್ಥಕ ವರ್ಷಗಳು. ಇಲ್ಲಿ ತನಕ ರೊಮ್ಯಾಂಟಿಕ್-ಎಮೋಷನಲ್ ಅಲ್ಲದೇ ಫೈಟ್ ಸೀಕ್ವೆನ್ಸ್​​ಗಳವರೆಗೂ ಎಲ್ಲಾ ತರಹದ ಸನ್ನಿವೇಶಗಳು ಎದುರಾಗಿವೆ. ಎಲ್ಲೂ ಎಂದೂ ಅಭಿನಯಿಸಲಿಲ್ಲ.. ಅನುಭವಿಸಿದ್ದೇವೆ, ಅರಿತುಕೊಂಡಿದ್ದೇವೆ. Happy anniversery my love. Thanks for everything..' ಎಂದು ರಿಷಬ್ ಹೇಳಿಕೊಂಡಿದ್ದಾರೆ.