ಸ್ಪರ್ಧೆ ವಿಜಯಪುರದ ಕೇಶವರೆಡ್ಡಿ- ಹಾಟ್ ಬಾಕ್ಸ್, ಎನ್. ಮೋಹನ್ -ಸಾಸ್‌ಪಾನ್, ವಿಜಯಪುರದ ಭಾಗ್ಯಮ್ಮ, ಕೆಎಸ್. ಪವನ್, ದೇವನಹಳ್ಳಿಯ ಎಸ್.ಎಂ.ಭ್ರಮರಾಂಭಿಕ, ಎ.ಬಿ.ಸುರೇಶ್, ಕನ್ನಮಂಗಲದ ರಾಮಸ್ವಾಮಿ, ಹಿತ್ತರಹಳ್ಳಿಯ ಎಚ್.ಜಿ. ಬೈರೇಗೌಡ ಅವರಿಗೆ ಸ್ಟೀಲ್ ವಾಟರ್ ಬಾಟಲ್‌ಗಳನ್ನು ವಿತರಿಸಲಾಯಿತು. 
ಜಿಲ್ಲೆ

ದೇವನಹಳ್ಳಿಯಲ್ಲೂ ಓದುಗರಿಗೆ ರಿಗೆ ಉಡುಗೊರೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೇವನಹಳ್ಳಿ: ವಿಜಯವಾಣಿ ಓದಿ ಕಾರು ಗೆಲ್ಲಿ ಸ್ಪರ್ಧೆ ವಿಜೇತ ತಾಲೂಕಿನ ಅದೃಷ್ಟಶಾಲಿಗಳಿಗೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿಜಯವಾಣಿ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ ಪಿ.ಪೂಜಾರ್ ಹಾಗೂ ತಂಡ ಬಹುಮಾನ ವಿತರಿಸಿತು.

ವಿಜಯವಾಣಿ ನಾಡಿನ ಜನರ ಮನಗೆದ್ದ ಪತ್ರಿಕೆಯಾಗಿದೆ. ಪ್ರಸರಣದಲ್ಲಿ ಆರಂಭದಿಂದ ಈವರೆಗೂ ಮೊದಲ ಸ್ಥಾನದಲ್ಲಿಯೇ ಓದುಗರ ಮನ ಗೆದ್ದಿದೆ. ಇದರೊಂದಿಗೆ ವಿಜಯವಾಣಿ ಓದುಗರಿಗೂ ಏನಾದರೂ ಕೊಡುಗೆ ರೂಪದಲ್ಲಿ ಕೊಡಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ವಿಜಯವಾಣಿ ಓದಿ ಸರಳ ಪ್ರಶ್ನೆಗೆ ಉತ್ತರಿಸಿ, ನಾರಿ ನಿನಗೊಂದು ಸ್ಯಾರಿ ಎಂಬ ಲಕ್ಕಿಡಿಪ್ ಸ್ಪರ್ಧೆಗಳ ಮೂಲಕ ಬಹುಮಾನಗಳನ್ನು ಓದುಗರಿಗೆ ನೀಡುತ್ತಾ ಬಂದಿದೆ ಎಂದು ವಿದ್ಯಾಧರ ಪಿ.ಪೂಜಾರ್ ಹೇಳಿದರು.ಸ್ಪರ್ಧೆ ವಿಜೇತರಲ್ಲಿ ಒಬ್ಬರಾದ ಬಿಸ್ಲೇರಿ ಕಂಪನಿ ಮ್ಯಾನೇಜರ್ ಎಂ.ರಾಮಸ್ವಾಮಿ ಮಾತನಾಡಿ, ವಿಜಯವಾಣಿ ಆರಂಭದಿಂದಲೇ ಪ್ರತೀ ಮನೆ ಬಾಗಿಲಿಗೆ ಪ್ರಚಾರಕರನ್ನು ಕಳುಹಿಸಿ ಪತ್ರಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡಿ ಅದರ ಮಹತ್ವ ತಿಳಿಸುತ್ತಿದ್ದರು. ಒಮ್ಮೆ ಈ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡವರು ಬೇರೆ ಪತ್ರಿಕೆ ಓದಲು ಮನಸ್ಸಾಗುವುದಿಲ್ಲ. ನಮಗೆ ಮುಂಜಾನೆ 5.50 ರಿಂದ 6 ಒಳಗೆ ಪತ್ರಿಕೆ ಮನೆಗೆ ಬಾರದೆ, ಓದದೇ ಇದ್ದರೆ ನಮಗೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಪತ್ರಿಕೆಯ ಎಲ್ಲ ಪುಟಗಳು ಮನಸ್ಸಿಗೆ ಮುದ ನೀಡುತ್ತದೆ ಎಂದರು.

ವಿಜಯಪುರದ ನೇಕಾರ ನಾಗರಾಜು ಮಾತನಾಡಿ, 10 ವರ್ಷಗಳಿಂದ ವಿಜಯವಾಣಿ ತರಿಸಿಕೊಳ್ಳುತ್ತಿದ್ದೇನೆ. ನಮ್ಮ ತಾತ ನಿತ್ಯ ಪತ್ರಿಕೆಯ ಪ್ರತಿ ಪುಟ ಓದುತ್ತಾರೆ. ಈ ಪತ್ರಿಕೆಯಲ್ಲಿ ಎಲ್ಲ ರೀತಿಯ ಸಾರ್ವಜನಿಕ ಸಮಸ್ಯೆಗಳ ಕುರಿತ ವರದಿಗಳು ಬರುತ್ತವೆ. ನೇಕಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಮ್ಮ ಸಮಸ್ಯೆ ಸರ್ಕಾರದ ಗಮನಸೆಳೆಯುವ ಲೇಖನಗಳು ಪ್ರಕಟಗೊಳ್ಳುತ್ತವೆ. ಓದುಗರನ್ನು ಹಿಡಿತದಲ್ಲಿಟ್ಟುಕೊಂಡಿದೆ ಎಂದರು.

ಸ್ಪರ್ಧೆ ವಿಜೇತೆ ಭಾಗ್ಯಮ್ಮ ಮಾತನಾಡಿ, ವಿಜಯವಾಣಿ ಎಂದರೆ ಅಚ್ಚುಮೆಚ್ಚು. ಅದರಲ್ಲೂ ನಾನು ಕಾಲೇಜು ಹಂತದಲ್ಲಿದ್ದಾಗ ವಿದ್ಯಾರ್ಥಿಮಿತ್ರ ಓದಿ ಉತ್ತಮ ಅಂಕ ಗಳಿಸಿದೆ. ಅಷ್ಟೇ ಅಲ್ಲದೆ ಸ್ಪರ್ಧಾ ಪರೀಕ್ಷೆಗಳು ಬರೆಯಲು ನೆರವಾಯಿತು. ಅದೇ ರೀತಿ ಮದುವೆಯಾದ ಮೇಲೂ ನನ್ನ ಪತಿ ಸಹ ವಿದ್ಯಾರ್ಥಿ ಮಿತ್ರ ಓದಿ ಕೆಲಸಕ್ಕೆ ಸೇರಿದರು ಎಂದರು.

ವಿಜೇತರಿಗೆ ಬಹುಮಾನ ವಿತರಣೆ: ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ವಿಜಯವಾಣಿ ಓದಿ ಬಹುಮಾನ ಗೆಲ್ಲಿ ಸ್ಪರ್ಧಾ ವಿಜೇತರಿಗೆ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ ಪಿ.ಪೂಜಾರ್, ಪ್ರಸರಣವಿಭಾಗದ ಮುನಿಸ್ವಾಮಿ ರಡ್ಡಿ, ಪ್ರಶಾಂತ ಗಾಯಕ್ವಾಡ್ , ನಾಯಕ್ ಬಹುಮಾನ ವಿತರಿಸಿದರು. 

ಓದುಗರಿಗಾಗಿ ವಿಜಯವಾಣಿ ಸ್ಪರ್ಧೆ ಹಮ್ಮಿಕೊಂಡಿತ್ತು ಎನ್ನುವುದಕ್ಕಿಂತ ನನಗೆ, ಓದುಗರಿಗೆ ಸ್ಫೂರ್ತಿ ತುಂಬುವ ಕೆಲಸ ಆಯಿತು ಎಂದು ಭಾವಿಸುತ್ತೇನೆ. ಇಂತಹ ಕಾರ್ಯಕ್ರಮಗಳು ನಿರಂತವಾಗಿ ನಡೆಯಬೇಕು. ಪತ್ರಿಕೆಗಳನ್ನು ಜನರು ಹೆಚ್ಚು ಹೆಚ್ಚು ಓದುವಂತೆ ಇಂತಹ ಸ್ಪರ್ಧೆಗಳು ಪ್ರೇರೇಪಿಸುತ್ತವೆ. ಉಮೇಶ್ ಬಹುಮಾನ ವಿಜೇತ, ದೊಡ್ಡಬಳ್ಳಾಪುರ