ಗಂಗಾವತಿ: ತಾಲೂಕಿನ ಆರಾಳ್ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ರಾತ್ರಿ ಬರ್ತಡೇ ನೆಪದಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದು, ಎಲ್ಲಂದರಲ್ಲಿ ಮದ್ಯದ ಬಾಟಲಿಗಳನ್ನು ಬೀಸಾಡಿದ್ದಾರೆ.
ಇದನ್ನೂ ಓದಿ:ಬರ್ತಡೇ ನೆಪದಲ್ಲಿ ಶಾಲೆಯಲ್ಲಿ ದಾಂಧಲೆ
ಜಾತಿ ಗಣತಿ ಹಿನ್ನೆಲೆಯಲ್ಲಿ ದಸರಾ ರಜೆ ಮುಂದುವರೆಸಿದ್ದು, ಶಾಲೆಯನ್ನು ಮುಚ್ಚಲಾಗಿತ್ತು. ಹಳೇ ಮಾರುತಿ ಕಾರಿನಲ್ಲಿ ಬಂದ ಕಿಡಿಗೇಡಿಗಳ ಗುಂಪು ಬೆಳಗಿನ ಜಾವದವರೆಗೂ ಬರ್ತಡೇ ಮಾಡಿಕೊಂಡಿದ್ದಾರೆ. ಅಲ್ಲದೇ ಮದ್ಯ ಸೇವಿಸಿ, ಬಾಟಲಿಗಳನ್ನು ಎಲ್ಲಂದರಲ್ಲಿ ಬೀಸಾಡಿದ್ದಾರೆ. ಗ್ರಾಮಸ್ಥರು ವಾಯುವಿಹಾರಕ್ಕಾಗಿ ಬಂದಾಗ ನೋಡಿದ್ದಾರೆ.
ಸ್ಥಳೀಯರು ಗ್ರಾಮೀಣ ಠಾಣೆಗೆ ದೂರು ನೀಡಿದರೂ, ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನಲಾಗಿದೆ. ಗ್ರಾಮದ ಮರ್ಯಾದೆ ವಿಚಾರವಾಗಿ ಪ್ರಕರಣ ದಾಖಲಿಸಲು ಕೆಲವರು ಒಪ್ಪುತ್ತಿಲ್ಲ. ಸ್ಥಳದಲ್ಲಿದ್ದ ಕಾರನ್ನು ಆಧಾರವಾಗಿಟ್ಟುಕೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಅವಕಾಶವಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲ ಯುವಕರು ಅರೋಪಿಸಿದ್ದಾರೆ. ಗ್ರಾಮೀಣ ಪೊಲೀಸರು ಘಟನೆಯನ್ನು ವಿಚಾರಿಸದೇ ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಉಡಾೆಯಿಂದ ವರ್ತಿಸಿದ್ದಾರೆ. ಇಂಥ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.