Righteous education is the need of the day 
ಜಿಲ್ಲೆ

ಸನ್ಮಾರ್ಗದ ಶಿಕ್ಷಣ ಇಂದಿನ ಅಗತ್ಯ

ಲೋಕಾಪುರ: ಉತ್ತಮ ವ್ಯಕ್ತಿತ್ವ ಹೊಂದಲು ಸನ್ಮಾರ್ಗದ ಶಿಕ್ಷಣ ಅತ್ಯಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದ ಉದಪುಡಿ ಸಂಸ್ಥೆಯ ಅಕ್ಷರ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸನ್ಮಾರ್ಗದ ಶಿಕ್ಷಣ ಇಂದಿನ ಅಗತ್ಯ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲು ಗುರು. ಆದ್ದರಿಂದ ಮಗುವಿಗೆ ಲೋಕದ ಅರಿವು ಆರಂಭವಾದಾಗಲೇ ನೈತಿಕ ಶಿಕ್ಷಣ, ಮನುಷ್ಯತ್ವದ ಮೌಲ್ಯ, ಆದರ್ಶ ವ್ಯಕ್ತಿಗಳ ಚರಿತ್ರೆ ಬೋಧಿಸಬೇಕು ಎಂದರು.

ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದರು.

ಸಂಸ್ಥೆ ಅಧ್ಯಕ್ಷ ಡಾ. ಕೆ.ಎಲ್. ಉದಪುಡಿ ಮಾತನಾಡಿ, ಪಾಲಕರು ಶಿಕ್ಷಣ ಸಂಸ್ಥೆಗಳ ಬೆಳವಣೆಗೆಯ ನಿಜವಾದ ರಾಯಭಾರಿಗಳು. ಪಾಲಕರು ಸಂಸ್ಥೆ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದಾಗ ಸಿಗುವ ಪ್ರಚಾರ ಬೇರೆ ಮೂಲದಿಂದ ಸಿಗಲು ಸಾಧ್ಯವಿಲ್ಲ ಎಂದರು.

ಪ್ರಾಚಾರ್ಯ ಎನ್.ಎಂ.ವಂದಾಲ, ಉಪಪ್ರಾಚಾರ್ಯ ಆರ್.ಜಿ.ಗಣಿ ಸಿಆರ್‌ಪಿ ಗಂಗಾಧರ ಗಾಣಗೇರ, ಪ್ರಾಚಾರ್ಯ ಪ್ರಭಾಕರ ದರ್ಜೆ, ಸಂಸ್ಥೆ ನಿರ್ದೇಶಕರಾದ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಗೋವಿಂದ ಕೌಲಗಿ, ಪವನ ಉದಪುಡಿ, ಸದಾಶಿವ ಉದಪುಡಿ ಇದ್ದರು.