raichur 
ಜಿಲ್ಲೆ

ಮಾಹಿತಿ ಹಕ್ಕು ಆಯೋಗದಿಂದ ಸಕಾಲದಲ್ಲಿ ಅರ್ಜಿಗಳ ವಿಲೇವಾರಿಯಾಗುತ್ತಿಲ್ಲ - ಆರೋಪ

ರಾಯಚೂರು ಮಾಹಿತಿ ಹಕ್ಕು ಆಯೋಗವೂ ಅರ್ಜಿದಾರರಿಗೆ ಸಕಾಲದಲ್ಲಿ ಮೇಲ್ಮನವಿಗಳನ್ನು ಇತ್ಯರ್ಥ ಪಡಿಸದೇ ವಿಳಂಭ ದೋರಣೆ ಮಾಡುವ ಮೂಲಕ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದು, 8.5 ವರ್ಷದ ನಂತರ ಮೇಲ್ಮನವಿ ವಿಚಾರಣೆ ನಿಗಧಿಪಡಿಸಿರುವದೇ ನಿದರ್ಶನವಾಗಿದೆಂದು ಆರ್‌ಟಿಐ ಕಾರ್ಯಕರ್ತ ಅಳ್ಳಪ್ಪ ಅಮರಾಪುರು ಆರೋಪಿಸಿದರು.

ನಗರದ ಪತ್ರಿಕಾ ಬವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡು ಕಾಮಗಾರಿ ಮಾಹಿತಿ ಕೇಳಿ 2015 ರಲ್ಲಿ ಅರ್ಜಿ ಸಲ್ಲಿಸಿದ್ದೆ. ಮಾಹಿತಿ ನೀಡದ ಕಾರಣ ಮೇಲ್ಮನವಿಯನ್ನು 2017 ಜುಲೈ 3 ರಂದು ಬೆಂಗಳೂರಿನ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಲಾಗಿತ್ತು 2017 ಏಪ್ರಿಲ್ 3 ರಂದು ವಿಚಾರಣೆ ನಡೆಸಿದ ಆಯೋಗ ಮುಂದಿನ ವಿಚಾರಣೆ ದಿನಾಂಕ ನಿಗಧಿಪಡಿಸಿ ಮಾಹಿತಿ ನೀಡುವದಾಗಿ ಭರವಸೆನೀಡಿತ್ತು.

ಆದರೆ 8.5 ವರ್ಷ ಕಳೆದ ನಂತರ 102 ತಿಂಗಳು ಗತಿಸಿದ್ದು 2025 ಅಕ್ಟೋಬರ್ 10 ರಂದುವಿಚಾರಣೆ ದಿನಾಂಕ ನಿಗಧಿಪಡಿಸಲಾಗಿದೆ. ಇಷ್ಟು ವರ್ಷಗಳ ನಂತರ ಅರ್ಜಿ ವಿಚಾರಣೆ ನಡೆಸಿದರೆ ಮಾಹಿತಿ ಆಯೋಗದ ನಿಯಮಗಳನ್ನೇ ಆಯೋಗವೇ ಉಲ್ಲಂಘಿಸಿದಂತಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಮಾಹಿತಿ ನೀಡಬೇಕೆನ್ನುವದು ನಿಯಮ. 10 ವರ್ಷಗಳಾದರೂ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸದೇ ಇರುವದರಿಂದ ಆಯೋಗ ನಿಜವಾದ ಕರ್ತವ್ಯವೇ ಲೋಪವಾದಂತಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.