ಮಾನ್ವಿ ಪ್ರವಾಸಿ ಮಂದಿರದಲ್ಲಿ ಸಚಿವ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳ ಸಭೆ ನಡೆಸಿದರು. ಶಾಸಕ ಜಿ.ಹಂಪಯ್ಯ ನಾಯಕ, ಪುರಸಭೆ ಅಧ್ಯಕ್ಷ ವೀರೇಶ, ಮಾನ್ವಿ ತಹಸೀಲ್ದಾರ್ ಭೀಮರಾಯ್, ಸಿರವಾರ ತಹಸೀಲ್ದಾರ ರವಿ ಅಂಗಡಿ ಇತರರಿದ್ದರು. 
ಜಿಲ್ಲೆ

ಹಕ್ಕುಪತ್ರ ಶೀಘ್ರ ಹಸ್ತಾಂತರಿಸಿ

Kopala - Desk - Eraveni

ಸಿರವಾರ: ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಕುಡಿವ ನೀರು ಹಾಗೂ ವಿದ್ಯುತ್ ಸಮಸ್ಯೆಗಳಾದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸರಿಪಡಿಸಬೇಕು ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿರವಾರ ಮತ್ತು ಮಾನ್ವಿ ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕುಡಿವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನಾತ್ಮಕವಾಗಿ ಸರ್ಕಾರದಿಂದ ಪಡೆದಿರುವ ನಿವೇಶನಗಳಿಗೆ ಹಕ್ಕುಪತ್ರ ಹಸ್ತಾಂತರಿಸಬೇಕು.

ಸರ್ಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಪಟ್ಟಾ, ಕುಡಿವ ನೀರು, ಚರಂಡಿ, ರಸ್ತೆ ವಿದ್ಯುತ್ ಸೇರಿ ವಿವಿಧ ಏಜೆನ್ಸಿಗಳಿಂದ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿ ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಜಿ.ಹಂಪಯ್ಯ ನಾಯಕ, ಪುರಸಭೆ ಅಧ್ಯಕ್ಷ ವೀರೇಶ, ಮಾನ್ವಿ ತಹಸೀಲ್ದಾರ್ ಭೀಮರಾಯ್, ಸಿರವಾರ ತಹಸೀಲ್ದಾರ್ ರವಿ ಅಂಗಡಿ, ಸಿರವಾರ ತಾಪಂ ಇಒ ಶಶಿಧರ ಹಿರೇಮಠ, ಹಿರಿಯ ಮುಖಂಡ ಬಿ.ಕೆ ಅಮರೇಶಪ್ಪ, ಪ್ರಮುಖರಾದ ಗಫೂರ ಸಾಬ್, ಖಾಲೀದ್ ಗುರು ಇತರರಿದ್ದರು.