ಜಿಲ್ಲೆ

ರಿದಮ್ ರಂಬಲ್ ಡಾನ್ಸ್ ಸ್ಪರ್ಧೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಶಾಂತಿನಿಕೇತನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನ. 23ರಂದು ಸಂಜೆ 5.30ಕ್ಕೆ "ರಿದಮ್ ರಂಬಲ್' ಸೀಸನ್ -3 ಡಾನ್ಸ್ ಸ್ಪರ್ಧೆಯನ್ನು 9- 10ನೇ ತರಗತಿ ಹಾಗೂ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ.

ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶಾಂತಿನಿಕೇತನ ಸಂಸ್ಥೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್, ಕಾಲೇಜಿನ ಪ್ರಾಚಾರ್ಯ ವೆಂಕಣ್ಣ ಹುಗ್ಗಿ, ವಿಭಾಗದ ಮುಖ್ಯಸ್ಥೆ ನ್ಯಾನ್ಸಿ ಪಿ. ಮತ್ತು ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಅಮೀನಾ ಲಕ್ಕುಂಡಿ, ಉಪಕಾರ್ಯದರ್ಶಿ ಸಾರ್ಥಕ್ ಕದಂ ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಸಂಯೋಜಕ ಶಿವಯೋಗಿ ಕೆರೂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.