ಜಿಲ್ಲೆ

ದ್ವಿಚಕ್ರ ವಾಹನ ಸವಾರ ಸಾವು

ಖಾನಾಪುರ: ಖಾನಾಪುರ-ಯಲ್ಲಾಪುರ ಹೆದ್ದಾರಿ ರಸ್ತೆಯ ಜುಂಜ್‌ವಾಡ ಬಳಿ ಸೋಮವಾರ ಧಾರವಾಡ ಕಡೆಗೆ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಧಾರವಾಡ ತಾಲೂಕು ಕೊಟ್ಟೂರಿನ ಆಯುಂ ಅಕ್ಬರ್ ನಾಯಿಕ್ (26) ಮತಪಟ್ಟ ಬೈಕ್ ಸವಾರ. ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡ ನಂದಗಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾನಾಪುರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.