ಜಿಲ್ಲೆ

ಬೈಕ್‌ಗಳ ಡಿಕ್ಕಿ ಸವಾರ ಸಾವು

ಹನೂರು: ತಾಲೂಕಿನ ಒಡೆಯರಪಾಳ್ಯ ಅರ್ಧನಾರಿಪುರ ಮಾರ್ಗಮಧ್ಯೆ ಬುಧವಾರ ಎರಡು ಬೈಕ್‌ಗಳ ಡಿಕ್ಕಿ ಸಂಭವಿಸಿ ಸವಾರೊಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ತಾಲೂಕಿನ ಅರ್ಧನಾರಿಪುರ ಗ್ರಾಮದ ಜಡೇಯಪ್ಪ (30) ಮೃತರು. ಕುಂಭ (25) ಹಾಗೂ ಮಾದೇಶ (20) ಗಾತಗೊಂಡವರು.

ಜಡೇಯಪ್ಪ ಸಹೋದರ ಕುಂಭ ಎಂಬಾತನೊಂದಿಗೆ ಕಾರ್ಯನಿಮಿತ್ತ ಒಡೆಯರಪಾಳ್ಯಕ್ಕೆ ಬೈಕ್‌ನಲ್ಲಿ ತೆರಳಿ ಮಧ್ಯಾಹ್ನ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಬೈಕ್ ಸವಾರರು ಗಾಯಗೊಂಡರು.

ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ತೀವ್ರ ಗಾಯಗೊಂಡಿದ್ದ ಜಡೇಯಪ್ಪ ಮಾರ್ಗಮಧ್ಯೆಯೇ ಮೃತಪಟ್ಟರು. ಗಾಯಗೊಂಡ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹನೂರು ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹನ್ನು ವಾರಸುದಾರಿಗೆ ಹಸ್ತಾಂತರಿಸಿದ್ದಾರೆ.