ಜಿಲ್ಲೆ

ವೇಂಜೆನ್ಸ್ ಪದ ಬಳಕೆಗೆ ಸ್ಪಷ್ಟನೆ ನೀಡಿದ ರಿಕ್ಕಿ ರೈ

ಬಿಡದಿ: ಬಿಡದಿ ಪೊಲೀಸ್ ಠಾಣೆ ಎದರು ವೇಂಜೆನ್ಸ್ ಎಂಬ ಪದ ಬಳಕೆ ಮಾಡಿದ್ದ ರಿಕ್ಕಿ ರೈ ಅವರು ಈ ಪದದ ಅರ್ಥದ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಡದಿ ಠಾಣೆಗೆ ತೆರಳಿ ಪೊಲೀಸರಿಗೆ ಪ್ರಕರಣ ಸಂಬಂಧ ಮಾಹಿತಿ ನೀಡಿ ಮಾತನಾಡುತ್ತಿದ್ದಾಗ ನಾನು ನನಗೆ ನ್ಯಾಯ ಬೇಕು, ಇಲ್ಲವಾದರೆ ನಾನು ವೇಂಜೆನ್ಸ್ (ಬಿಡುಗಡೆ) ಹುಡುಕುತ್ತೇನೆ ಎಂದು ಹೇಳಿದ್ದೇನೆ. ಈ ಮಾತನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು ಅದನ್ನು ಸೇಡು ಅಥವಾ ಹಿಂಸಾತ್ಮಕ ಪ್ರತಿಕ್ರಿಯೆ ಎಂದು ವಿಶ್ಲೇಷಣೆ ಮಾಡಿದ್ದಾರೆೆ ಎಂದಿದ್ದಾರೆ.

ಆದರೆ, ವೇಂಜೆನ್ಸ್ ಪದದ ಅರ್ಥ ನಾನು ಕಾನೂನುಮಾರ್ಗದಲ್ಲಿ ನ್ಯಾಯವನ್ನು ಹುಡುಕುತ್ತೇನೆ ಎಂದು. ಪ್ರಕರಣ ದಾಖಲಿಸಿ, ಪೊಲೀಸ್ ತನಿಖೆಗೆ ಸಹಕರಿಸಿ, ನ್ಯಾಯಾಂಗದ ಕ್ರಮಗಳ ಮೂಲಕ ನ್ಯಾಯ ಪಡೆಯಲು ಬದ್ಧನಾಗಿದ್ದೇನೆ. ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ಹಾಗೂ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಗೌರವಿಸುತ್ತೇನೆ. ಕಾನೂನುಮಾರ್ಗದಲ್ಲಿ ಮತ್ತು ಶಾಂತಿಯುತವಾಗಿ ನ್ಯಾಯ ಹುಡುಕಲು ಬದ್ಧನಾಗಿದ್ದೇನೆ ಎಂಬುದನ್ನು ಪುನಃ ದೃಢಪಡಿಸಲು ಪತ್ರಿಕಾ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.