ಜಿಲ್ಲೆ

ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಭತ್ತದ ಕೃಷಿ ಪ್ರಾತ್ಯಕ್ಷಿಕೆ

ಸೌಮ್ಯ ಆರ್

ಮೂಡುಬಿದಿರೆ: ಮಂಗಳೂರು ಕದ್ರಿ ಚಿನ್ಮಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಶುಕ್ರವಾರ ನಡೆಯಿತು.

ಗುತ್ತಿನ ಯಜಮಾನ ಕೆ.ಪಿ.ಸಂತೋಷ್ ಕುಮಾರ್ ಎಂ.ಶೆಟ್ಟಿ ಪ್ರಾರ್ಥನೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಗುತ್ತಿಗೆ ಸೇರಿದ 60 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ನಾವು ಭತ್ತಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ಕೃಷಿಕರೆನ್ನುವ ಹೆಸರು ಪಡೆದಿದ್ದೇವೆ. ನಗರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಬಗ್ಗೆ ಮಾಹಿತಿ ನೀಡುವ ಅವಕಾಶ ದೊರೆತ್ತಿರುವುದು ಸಂತಸದ ವಿಷಯ ಎಂದರು.

ಕೆಎಂಎಫ್ ನಿರ್ದೇಶಕ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಪುತ್ತಿಗೆಗುತ್ತು ಕಡಂದಲೆ ಪರಾಡಿ ಕೂಡು ಕುಟುಂಬ ದೈವ ಹಾಗೂ ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಬೆಳೆಯುತ್ತಿರುವ ಪ್ರತಿಷ್ಠಿತ ಮನೆತನ ಎಂದರು.

ಶಾಲೆಯ ವತಿಯಿಂದ ಕೆ.ಪಿ.ಸಂತೋಷ್ ಕುಮಾರ್ ಎಂ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಪೂರ್ಣಿಮಾ ಭಟ್, ಶಿಕ್ಷಕಿಯರಾದ ಶೋಭಾ ಭಟ್, ಜಯಲಕ್ಷ್ಮೀ, ವನಜಾ, ವಿದ್ಯಾರ್ಥಿ ಪಾಲಕರಾದ ರಾಕೇಶ್ ಕುಮಾರ್, ದಿವ್ಯಶ್ರೀ ರಾಕೇಶ್ ಉಪಸ್ಥಿತರಿದ್ದರು.

ಶಾಲೆ 38 ವಿದ್ಯಾರ್ಥಿಗಳು ನಾಟಿ ಮಾಡಿದರು. 100 ಅಧಿಕ ಕೃಷಿ ಕಾರ್ಮಿಕರು ಇದ್ದರು.