ಬ್ರಹ್ಮಾವರ: ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ ಆರಂಭಿಸಿದ ಮೊದಲ ಕೀರ್ತಿ ಉಪ್ಪೂರು, ಕೊಳಲಗಿರಿ ಯುವ ವಿಚಾರ ವೇದಿಕೆಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಯುವ ವಿಚಾರ ವೇದಿಕೆ ಸಂಘಟಕರು ನಾಲ್ಕು ವರ್ಷದಿಂದ ಹಡಿಲು ಭೂಮಿಯಲ್ಲಿ ಬೆಳೆದ ಬೆಳೆಯನ್ನು ಸಾಲ್ಮರ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ನೀಡುತ್ತಿದ್ದು, ಸೋಮವಾರ ಈ ವರ್ಷದ ಎರಡು ಕ್ವಿಂಟಾಲ್ ಅಕ್ಕಿ ವಿತರಿಸಿ ಮಾತನಾಡಿದರು.
ಗ್ರಾಪಂ ಸದಸ್ಯ ಅಶ್ವಿನ್ ರೋಚ್, ಸ್ಪಂದನಾ ಕೇಂದ್ರ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಜನಾರ್ದನ, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಹಿರಿಯ ಸದಸ್ಯರಾದ ಮಾಧವ, ಕಾರ್ಯದರ್ಶಿ ಸುಕೇಶ್, ಮಹಿಳಾ ಸದಸ್ಯರಾದ ಶೋಭಾ ಯೋಗೀಶ್, ಶಕುಂತಲಾ, ಬೃಂದಾ, ಸೌಮ್ಯ, ಹರಿಣಾಕ್ಷಿ, ಸದಸ್ಯರಾದ ಸದಾಶಿವ, ಅಶೋಕ್, ರವೀಂದ್ರ, ಶಶಿಕುಮಾರ್, ಸುಬ್ರಹ್ಮಣ್ಯ, ವೈಭವ್, ಶ್ರೇಯಸ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಸದಾಶಿವ ವಂದಿಸಿದರು.