ಬೆಳಗಾವಿ : ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಮಗ್ರ ಪ್ರಗತಿ ಪರಿಶೀಲನೆ ಮಾಡಿದರು. ಎಲ್ಲ ಆರೋಗ್ಯ ಕಾರ್ಯಕ್ರಮಗಳ ಭೌತಿಕ ಸಂಪನ್ಮೂಲಗಳ ಮತ್ತು ಮಾನವ ಸಂಪನ್ಮೂಲಗಳ ಅಗತ್ಯತೆ ಮತ್ತು ಪೂರೈಕೆ ಬಗ್ಗೆ ಚರ್ಚಿಸಿ ಪರಿಶೀಲನೆ ಮಾಡಿದರು. ಹಾಗೂ ಆರ್ಥಿಕ ಚಟುವಟಿಕೆಗಳ ಕುರಿತು ಅನುಮೋದನೆ ಪಡೆಯುವದರ ಬಗ್ಗೆ ಚರ್ಚಿಸಿದರು. ಕಚೇರಿಯ ಕಾಗದಪತ್ರಗಳು, ಟೆಂಡರ ಕಡತಗಳ ಪರಿಶೀಲನೆ ಹಾಗೂ ಇನ್ನೀತರ ವಿಷಯಗಳ ಕಡತ ಪರಿಶೀಲನೆ ಮಾಡಿ ಅನುಮೋದಿಸಲಾಯಿತು. ಅದರ ಜೊತೆಗೆ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಾರ್ವಜನಿಕರಿಗೆ ಆರೋಗ್ಯ ದೃಷ್ಠಿಯಿಂದ ಹಮ್ಮಿಕೊಳ್ಳಲಾದ “ಗೃಹ ಆರೋಗ್ಯ –ಮನೆ ಬಾಗಿಲಿಗೆ ಆರೋಗ್ಯ” ಕಾರ್ಯಕ್ರಮವನ್ನು ಈ ತಿಂಗಳ ಜನೆವರಿ-2025 ನೇ ತಿಂಗಳಲ್ಲಿ ಪ್ರಾರಂಬಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಿಬ್ಬಂಧಿಗಳ ಕುಂದು ಕೊರತೆ ಆಲಿಸಿ, ಸಿಬ್ಬಂಧಿಗಳ ಸಮಸ್ಯೆಗೆಳಿಗೆ ಪರಿಹಾರ ನೀಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಭರವಸೆ ನೀಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ರವರು ಎನ್ ಹೆಚ್ ಎಮ್ ಸಿಬ್ಬಂದಿಗಳ ಕೊರತೆ ಹಾಗೂ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಅದರ ಜೊತೆಗೆ ಎಮ್ ಬಿ ಬಿ ಎಸ್ ಡಾಕ್ಟರ ಮತ್ತು ಸ್ಟಾಪ್ ನರ್ಸ್ಗಳ ನೇಮಕಾತಿ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್ ಗಡೇದ, ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿ ಡಾ. ಸಂಜಯ ದೊಡಮನಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ. ವಿಶ್ವನಾಥ ಭೋವಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ.ವಿವೇಕ ಹೊನ್ನಳ್ಳಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳು, ಡಾ.ಗೀತಾ ಕಾಂಬಳೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು.