ಸುಳ್ಯ: ಸ್ನೇಹ ಸಂಗಮ ಯೋಗ ಬಳಗ, ಪತಂಜಲಿ ಯೋಗ ಕೇಂದ್ರ ಹಾಗೂ ಭುವನ್ ರಾಜ್ ಫೌಂಡೇಷನ್ ಮೈಸೂರು ಸಹಯೋಗದೊಂದಿಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಮಕ್ಕಳು ಪಾರಮ್ಯ ಮೆರೆದಿದ್ದಾರೆ. 8ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹಸ್ತ ಗೊರಸಿನಮನೆ ಬೆಳ್ಳಿ ಪದಕ, 8 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಯಶ್ವಿನ್ ತಂಟೆಪ್ಪಾಡಿ ಬೆಳ್ಳಿ ಪದಕ, 8 ವರ್ಷದಿಂದ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು ಕಂಚಿನ ಪದಕ, 12 ವರ್ಷದಿಂದ 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸುಖಿತಾ 4ನೇ ಸ್ಥಾನ, ತನ್ವಿ ಅಂಚನ್ ಪೆಲರ್ಂಪಾಡಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡುತ್ತಿದ್ದಾರೆ.