ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಸಿಂಧನೂರಿನಲ್ಲಿ ರಾಯಣ್ಣ ಯುವ ಗರ್ಜನೆಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಅಂಗವಾಗಿ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. 
ಜಿಲ್ಲೆ

ಕ್ರಾಂತಿವೀರನ ಭಾವಚಿತ್ರ ಮೆರವಣಿಗೆ ಅದ್ದೂರಿ

Kopala - Desk - Eraveni

ಸಿಂಧನೂರು: ಸ್ವಾತಂತ್ರೃ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ರಾಯಣ್ಣ ಯುವ ಗರ್ಜನೆ ಸಮಿತಿಯಿಂದ ಶುಕ್ರವಾರ ಕ್ರಾಂತಿವೀರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು.

ಬೆಳಗ್ಗೆ ಗಣೇಶ ದೇವಸ್ಥಾನದಿಂದ ಆರಂಭಗೊಂಡ ರಾಯಣ್ಣ ಭಾವಚಿತ್ರ ಮೆರವಣಿಗೆ ಬಸವವೃತ್ತ, ಗಾಂಧಿವೃತ್ತ, ವಾಲ್ಮೀಕಿವೃತ್ತ, ಕನಕದಾಸ ವೃತ್ತದವರೆಗೆ ಡೊಳ್ಳು ಕುಣಿತ, ವಾದ್ಯಮೇಳದೊಂದಿಗೆ ನಡೆಯಿತು. ತುರ್ವಿಹಾಳ ಅಮೋಘ ಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ್ಪ,

ಕನಕಗುರುಪೀಠ ತಾಲೂಕು ಅಧ್ಯಕ್ಷ ಅಮರೇಶಪ್ಪ ಮೈಲಾರ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕೆ.ಭೀಮಣ್ಣ, ಪ್ರಧಾನ ಕಾರ್ಯದರ್ಶಿ ಸುರೇಶ ಹಚ್ಚೊಳ್ಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ, ರಾಯಣ್ಣ ಯುವ ಗರ್ಜನೆ ಸಮಿತಿ ತಾಲೂಕು ಅಧ್ಯಕ್ಷ ರಾಮು ಕೆಎಂಎಸ್, ಫಕೀರಪ್ಪ ತಿಡಿಗೋಳ, ನಾಗು ಇತರರಿದ್ದರು.