ಬಾದಾಮಿ: ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಯತ್ನಾಳರನ್ನು ತಂದೆ ಮಕ್ಕಳ ಕುತಂತ್ರದಿಂದ ಉಚ್ಚಾಟನೆ ಮಾಡಿದ್ದು ಖಂಡನೀಯ. ಶೀಘ್ರದಲ್ಲಿ ಉಚ್ಚಾಟನೆ ಹಿಂತೆಗೆದುಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಸ್.ರುದ್ರಗೌಡ್ರ ಆಗ್ರಹಿಸಿದರು.
ನಗರದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಖಂಡಿಸಿ ನಡೆಸಿದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಮಾಜಿ ತಾ.ಪಂ ಸದಸ್ಯ ನಿಂಗಪ್ಪ ಹೊಸಮನಿ, ಆರ್.ಬಿ.ಸಂಕದಾಳ ಮಾತನಾಡಿ ಪಕ್ಷ ಕಟ್ಟಲು ಕೇವಲ ಯಡಿಯೂರಪ್ಪ ಮಾತ್ರವಲ್ಲ, ಅನೇಕ ನಾಯಕರು ಶ್ರಮಿಸಿದ್ದಾರೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಶ್ರಮಿಸಿದ ಹಾಗೂ ಹಿಂದುಗಳ ರಕ್ಷಣೆಗೆ ಬದ್ಧರಾಗಿದ್ದ ಬಸನಗೌಡ ಪಾಟೀಲರನ್ನು ಶೀಘ್ರವಾಗಿ ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು ಎಂದರು.
ಅಶೋಕ ಗಂಗಾಲ, ಪಂಚಸೇನಾ ತಾಲೂಕಾಧ್ಯಕ್ಷ ಮಳಿಶಾಂತ ಬಿಳೇಬಾಳ, ಬಸು ದೂಳಪ್ಪನವರ, ಬಸವರಾಜ ಉಳ್ಳಾಗಡ್ಡಿ, ಶಿವು ತುಪ್ಪದ, ಚನ್ನು ಚಿಕ್ಕನ್ನವರ, ಬಸು ಅಮರಗೋಳ, ಶರಣಪ್ಪ ಮಾವಿನಮರದ, ಪ್ರವೀಣ ಸುಂಕದ, ಪ್ರದೀಪ ತೋಟರ, ಸಿದ್ದು ಗುಡುಗುಡಿ, ಮುತ್ತಣ್ಣ ಹುಂಬಿ, ಪ್ರಕಾಶ ದನ್ನೂರ, ಕುಬೇರಗೌಡ ಪಾಟೀಲ, ಚನ್ನಪ್ಪ ಹಟ್ಟಿ, ಪ್ರವೀಣ ಗೌಡರ, ಮೇಣಸಿನಕಾಯಿ ಮತ್ತಿತರರಿದ್ದರು.