ದೇವನಹಳ್ಳಿ : ತಾಲೂಕಿನ ಬೊಮ್ಮವಾರದ ಐತಿಹಾಸಿಕ ಶ್ರೀ ಸುಂದರೇಶ್ವರ ದೇವಾಲಯದಲ್ಲಿನ 600 ವರ್ಷ ಹಳೆಯ ಪುರಾತನ ಕಲ್ಯಾಣಿಯನ್ನು ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಟಕದ "ಪ್ರಕೃತಿ ಪಲ್ಸ್' ಸ್ವಯಂಸೇವಕರು, ಭಾರತ ಸರ್ಕಾರದ ಯುವ ವ್ಯವಹಾರಗಳ ಇಲಾಖೆ, ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರ, ಬೆಂಗಳೂರು, ರಾಜ್ಯ ಎನ್ಎಸ್ಎಸ್ ಕೋಶ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವುಡೇ ಪಿ.ಕೃಷ್ಣ, ಕಲ್ಯಾಣಿಗಳ ಪುನಶ್ಚೇತನವೆಂದರೆ ನಮ್ಮ ಪುರಾತನ ಜಲ ಸಂಸತಿಯ ಮೌಲ್ಯ ಪ್ರತಿಬಿಂಬಿಸುವ ಮಹತ್ವದ ಹೆಜ್ಜೆ. ಇವು ಕೇವಲ ನೀರಿನ ಶೇಖರಣೆ ಮಾತ್ರವಲ್ಲ, ದೇವರಭಕ್ತಿಯ ತಾಣಗಳಾಗಿವೆ. ಅಂತಹ ಪುರಾತನ ಕಲ್ಯಾಣಗಳನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಎನ್ಎಸ್ಎಸ್ ಸ್ವಯಂಸೇವಕರ ನಿಷ್ಠೆ ಮತ್ತು ಸೇವಾ ಮನೋಭಾವ ಶ್ಲಾನೀಯ ಎಂದು ಹೇಳಿದರು. ಶ್ರಮದಾನದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡು ಶುದ್ಧೀಕರಣ ಕಾರ್ಯ ನಡೆಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಬೀರೇಶ್, ಸದಸ್ಯರಾದ ಮಂಜುನಾಥ್, ರಾಮಮೂರ್ತಿ, ಎನ್ಎಸ್ಎಸ್ ಅಧಿಕಾರಿ ನವೀನ್ ಕುಮಾರ್ ಮತ್ತು ಎನ್ಎಸ್ಎಸ್ ಸ್ವಯಂಸೇವಕರು, ರಾಷ್ಟ್ರೀಯ ಯುವ ಯೋಜನೆಯ ಡಾ.ಪ್ರಶಾಂತ್ ಇತರರು ಇದ್ದರು.