ಬೆಣಗಾಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂದಾಯಾಧಿಕಾರಿ ಆನಂದ್ ಹೇಳಿಕೆ ದಾಖಲಿಸಿಕೊಳ್ಳುತ್ತಿರುವುದು.  
ಜಿಲ್ಲೆ

ಆಂಜನೇಯ ಸ್ವಾಮಿ ದೇವಾಲಯಕ್ಕೆ ಕಂದಾಯಾಧಿಕಾರಿ ಭೇಟಿ

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪೂಜೆ ನನೆಗುದ್ದಿಗೆ ಬಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಸೋಮವಾರ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಣಗಾಲು ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ರಾಕೇಶ್ ಅವರು ಒಂದು ವರ್ಷದ ಹಿಂದೆ ಮುಜರಾಯಿ ಇಲಾಖೆಯಿಂದ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ದೇವಸ್ಥಾನಕ್ಕೆ ಸೇರಿದ ಸರ್ವೇ ನಂ. 8ರಲ್ಲಿ 5.1 ಎಕರೆ ಜಮೀನಿದ್ದು, ಇಲ್ಲಿ ಬೆಳೆ ಬೆಳೆಯಲು ಬೇರೆಯವರಿಗೆ ಗುತ್ತಿಗೆ ಆದಾರದಲ್ಲಿ ಕೊಡುತ್ತಿದ್ದು, ಕೆಲ ಕಾರಣಗಳಿಂದ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿರಲಿಲ್ಲ. ಅಲ್ಲದೆ ಜಮೀನು ವಿಚಾರವಾಗಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಹಾಗೂ ತಹಸೀಲ್ದಾರ್ ಆದೇಶದ ಮೇರೆಗೆ ಕಂದಾಯ ಅಧಿಕಾರಿ ಆನಂದ್, ಗ್ರಾಮ ಆಡಳಿತ ಅಧಿಕಾರಿ ದುರ್ಗೇಶ್, ಗ್ರಾಮಸ್ಥರು ಹಾಗೂ ಅರ್ಚಕರ ಹೇಳಿಕೆಯನ್ನು ದಾಖಲಿಸಿಕೊಂಡರು.

ಬಳಿಕ ಮಾತನಾಡಿದ ಕಂದಾಯ ಅಧಿಕಾರಿ ಆನಂದ್, ಇದರ ವರದಿಯನ್ನು ಶೀಘ್ರ ತಹಸೀಲ್ದಾರ್ ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಧನರಾಜ್, ಅರ್ಚಕ ರಾಕೇಶ್, ಗ್ರಾಮಸ್ಥರಾದ ರಂಗನಾಥ್, ಗಿರೀಶ್, ಅರವಿಂದರಾಜ ಅರಸ್, ಮಂಜು ನಾಯ್ಕ, ರಾಜೇಶ್, ಸದಾಶಿವ ,ಕುಮಾರ್, ದೇವರಾಜ್, ರಾಮು, ಗಣೇಶ್, ಲೋಕೇಶ್, ಸುನಿಲ್, ರಾಮಣ್ಣ, ರೇವಣ್ಣ, ರಾಮೇಗೌಡ, ಮೋಹನ್‌ಗೌಡ, ಕಾಂತರಾಜ್, ಸುನಿಲ್ ಇತರರು ಇದ್ದರು.