ಗುಬ್ಬಿ: ಜಮೀನು ಖಾತೆ ಸಂಬಂಧಿಸಿದ ದಾಖಲೆ ನೀಡಲು ರೈತನ ಬಳಿ 10 ಸಾವಿರ ಲಂಚ ಪಡೆಯುವ ವೇಳೆ ಸಿ.ಎಸ್.ಪುರ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿ.ಎಸ್.ಪುರ ನಾಡ ಕಚೇರಿಯಲ್ಲಿ ರೈತ ನಾಗರಾಜ್ ಬಳಿ 10 ಸಾವಿರ ಹಣವನ್ನು ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಪಡೆಯುವ ವೇಳೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗದ್ದೆಹಳ್ಳಿಯ ಚಿಕ್ಕಯಲ್ಲಯ್ಯ ಪುತ್ರ ನಾಗರಾಜ್ ಅವರು ಉಂಗ್ರ 201/1 ಸರ್ವೇ ನಂಬರ್ ಜಮೀನಿನ ಹಕ್ಕು ಖುಲಾಸೆ ಮಾಡಿಕೊಡುವಂತೆ ದಾಖಲೆ ಕೊಟ್ಟ ಬಳಿಕ ಸ್ಥಳಕ್ಕೆ ಆಗಮಿಸಿ ಸ್ಥಳ ತನಿಖೆ ಮಾಡಲು 10 ಸಾವಿರ ಹಣ ಬೇಡಿಕೆಯಿಟ್ಟು ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 2023ರಲ್ಲಿ ತುಮಕೂರು ಟೂಡಾದಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ನರಸಿಂಹಮೂರ್ತಿ ಮತ್ತೊಮ್ಮೆ
ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.