ಜಿಲ್ಲೆ

ಕಂದಾಯ ನೌಕರರಿಗೆ ವಿಮಾ ಸೌಲಭ್ಯ ಒದಗಿಸಿ ; ತಹಸೀಲ್ದಾರ್‌ಗೆ ನೌಕರರ ಮನವಿ

ಮಸ್ಕಿ: ವಿಮಾ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ನೌಕರರ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲೂಕು ಘಟಕದ ಅಧ್ಯಕ್ಷ ಸಯ್ಯದ್ ಅಕ್ತರ್ ಅಲಿ ಮಾತನಾಡಿ, ಹೊರ ರಾಜ್ಯಗಳಿಂದ ಆಗಮಿಸುವವರನ್ನು ಗುರುತಿಸಿ ಹೋಂ ಕ್ವಾರಂಟೈನ್ ಮಾಡುವ ಜತೆಗೆ ಸರ್ಕಾರದ ಇತರ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ಸೋಂಕು ನಿಯಂತ್ರಣಕ್ಕೆ ನೌಕರರು ಶ್ರಮಿಸುತ್ತಿದ್ದಾರೆ. ಹೀಗಾಗಿ ವಿಮಾ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು. ಉಪತಹಸೀಲ್ದಾರ್ ಪ್ರಕಾಶ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಅಶೋಕ, ಪ್ರಮುಖರಾ ಮಂಜುನಾಥ, ಅಬ್ದುಲ್ ರವೂಫ್, ಅಮರೇಶ, ಬಾಬು, ಉಮಾದೇವಿ, ಕರಿಬಸಪ್ಪ, ನಾಗಲಿಂಗ ಪತ್ತಾರ, ಕೃಷ್ಣಪ್ಪ, ರಿಯಾನಾ ಬೇಗಂ ಇದ್ದರು.