ಜಿಲ್ಲೆ

ಕಾಮಧೇನು ಸ್ವ ಸಹಾಯ ಸಂಘದಿಂದ ಕಂದಾಯ ವಸೂಲಾತಿ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಪಟ್ಟಣದ ವ್ಯಾಪ್ತಿಯಲ್ಲಿ 30 ಸ ್ವಸಹಾಯ ಸಂಘಗಳಿದ್ದು ನೀರು ಮತ್ತು ಕಂದಾಯ ವಸೂಲಾತಿಗೆ ಕಾಮಧೇನು ಸ್ವ ಸಹಾಯ ಸಂಘ ಒಪ್ಪಿಗೆ ಸೂಚಿಸಿದೆ ಎಂದು ಸಮುದಾಯ ಸಂಘಟಕ ಅಧಿಕಾರಿ ಲಕ್ಷೇಗೌಡ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಆಯೋಜಿಸಿದ್ದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿ.ಎಂ ಸ್ವನಿಧಿ) ಮತ್ತು ಸ್ವನಿಧಿ ಸೇ ಸಮೃದ್ಧಿ ಯೋಜನೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ 127 ಬೀದಿ ಬದಿ ವ್ಯಾಪಾರಿಗಳಿದ್ದಾರೆ. 124 ಜನರಿಗೆ 10 ಸಾವಿರ ರೂ.ಸಾಲ ನೀಡಲಾಗಿದೆ. ಇದರಲ್ಲಿ 81 ಜನ ಸಾಲ ಮರುಪಾವತಿಸಿದ್ದಾರೆ. 53 ಜನರಿಗೆ 20 ಸಾವಿರ ರೂ. ಸಾಲ ಮಂಜೂರಾಗಿದೆ. 67 ಜನರಿಗೆ ಸಾಲ ಮಂಜೂರಾಗಿದೆ. 11ಜನರಿಗೆ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದಾರೆ. ನಗದು ರಹಿತ ವ್ಯವಹಾರ ಅಳವಡಿಸಿಕೊಂಡ ಬೀದಿ ಬದಿ ವ್ಯಾಪಾರಿಗಳ 87 ಕುಟುಂಬಗಳಿಗೆ ಕ್ಯಾಷ್‌ಬ್ಯಾಕ್ ಸೌಲಭ್ಯ ಲಭ್ಯವಾಗಿದೆ ಎಂದರು. ಪಿಎಂ ಸುರಕ್ಷಾ ಭೀಮಾ ಯೋಜನೆ, ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ, ಪಿಎಂ ಜನ್‌ಧನ್ ಯೋಜನೆ, ಪಿಎಂ ಶ್ರಮಯೋಗಿ ಮಾನ್‌ಧನ್ ಯೋಜನೆ, ಜನನಿ ಸುರಕ್ಷಾ ಯೋಜನೆ ಪಿ.ಎಂ.ಮಾತೃ ವಂದನಾ ಯೋಜನೆ,ಕಟ್ಟಡ ಹಾಗೂ ಇತರೆ ನಿರ್ಮಾಣಗಳ ಕಾರ್ಮಿಕರ ನೋಂದಣಿ ಯೋಜನೆ ಜಾರಿಯಲ್ಲಿದೆ ಎಂದರು.

ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಮಾತನಾಡಿದರು. ಪಪಂ ಸದಸ್ಯ ಶೋಜಾ, ಸಿಬ್ಬಂದಿ ಉಷಾ, ಶೃತಿ ಇದ್ದರು.