ರೇವತಗಾಂವ: ಗ್ರಾಮದ ಖಂಡೋಬಾ ದೇವರು ಹಾಗೂ ಅವರ ಧರ್ಮಪತ್ನಿಯರಾದ ಮಾಲಸಾಬಾಯಿ ಮತ್ತು ಭಾನುಬಾಯಿ ದೇವರುಗಳ ಜಾತ್ರೆ ಶನಿವಾರ, ಭಾನುವಾರ ಅದ್ದೂರಿಯಾಗಿ ನೆರವೇರಿತು.
ಶನಿವಾರ ಬೆಳಗಿನ ಜಾವ 5 ಗಂಟೆಗೆ ರುದ್ರಾಭಿಷೇಕ, ಭಕ್ತರಿಂದ ದೀಡ ನಮಸ್ಕಾರ ನಡೆಯಿತು. ಮಧ್ಯಾಹ್ನ 3 ಗಂಟೆಗೆ ಖಂಡೋಬಾ ದೇವರ ಪಲ್ಲಕ್ಕಿ ಮಹೋತ್ಸವ ಸುಮಂಗಲೆಯರ ಆರತಿ, ಪೂಜಾರಿಗಳ ಜ್ಯೋತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕಂದಲಗಾಂವದ 15 ಪ್ರಸಿದ್ಧ ಕುದುರೆಗಾರರು ಖಂಡೋಬಾ ದೇವರ ಅವತಾರದೊಂದಿಗೆ ಸವಾರಿ ಮಾಡಿದರು. ಸಂಜೆ 8 ಗಂಟೆಯಿಂದ ಭಾನುವಾರ ನಸುಕಿನ ಜಾವ 4 ಗಂಟೆಯವರೆಗೆ ಸಾಂಗಲಿ ಜಿಲ್ಲೆಯ ಆಸಂಗಿ ಗ್ರಾಮದ ಬಾಳು ವಾೆ ಮತ್ತು ಮಾಳಸಾ ಮುರಳಿ ಹಾಗೂ ಮಂಗಸೂಳಿ ನೇತೃತ್ವದಲ್ಲಿ ಖಂಡೋಬಾ ದೇವರ ಚರಿತ್ರಾಮೃತ ಜರುಗಿತು.
ಭಾನುವಾರ ನಸುಕಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಲಂಗೂರ ಹರಿಯುವ ಕಾರ್ಯಕ್ರಮ ನೆರವೇರಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.