ಹೊರ್ತಿ: ಜಗದ್ಗುರು ರೇವಣಸಿದ್ದೇಶ್ವರರು ಲೋಕ ಕಲ್ಯಾಣಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸಮಾಜದಲ್ಲಿ ಶಾಂತಿ ಸಾಮರಸ್ಯ ಸ್ಥಾಪನೆಗೆ ಪ್ರಯತ್ನಿಸಿದ್ದಾರೆ ಎಂದು ಸೋಮನಾಥ ಶಿವಾಚಾರ್ಯರ ಗುರುಮಠ ಕನ್ನೂರ ತಿಳಿಸಿದರು.
ಗ್ರಾಮದಲ್ಲಿ ಬುಧವಾರ ರೇವಣಸಿದ್ದೇಶ್ವರ ದೇವರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೇವಣಸಿದ್ದೇಶ್ವರರು ಲೋಕ ಸಂಚಾರದ ಮೂಲಕ ಭಕ್ತರಿಗೆ ಶಿವತತ್ವವನ್ನು ಬೋಧಿಸಿದರು ಎಂದರು.
ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ತಡವಲಗ ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತ್ರೆ ಮುಖಾಂತರ ಸರ್ವಧರ್ಮದ ಭಕ್ತರಿಗೆ ಸಾಮರಸ್ಯದ ಬದುಕು ಕಲಿಸುವ ಪ್ರತೀತಿ ಪಸರಿಸಲಿ ಎಂದರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ, ಬಿ.ಎಂ. ಕೋರೆ, ಅಪ್ಪಸಾಹೇಬ ಪಟ್ಟಣಶೆಟ್ಟಿ, ಶ್ರೀಮಂತ ಇಂಡಿ, ಶಂಕರ ರಾಠೋಡ, ಸಂತೋಷ ಗಾಣಗೇರ, ಮಲ್ಲಿಕಾರ್ಜುನ ತೇಲಿ, ಬುದ್ಧಪ್ಪ ಭೋಷಗಿ, ಮಲ್ಲಣ್ಣ ಸಕ್ರಿ, ಗುರಣ್ಣಗೌಡ ಪಾಟೀಲ, ಶಿವಲಿಂಗಪ್ಪ ಪೂಜಾರಿ, ಶಿವಾಜಿ ಮಾ. ಮೋರೆ, ಸಂಜಯ ಪಾಟೀಲ, ಶೇಕು ಪೂಜಾರಿ, ಸುರೇಶ ರೂಗಿ, ಗೋಪಾಲ ಬಸನಾಳ, ಶ್ರೀಮಂತ ಗಡ್ಡದ, ಧರ್ಮಣ್ಣ ದ. ದಶವಂತ, ಅಶೋಕ ಪೂಜಾರಿ, ಶಿವಪ್ಪ ಮೇತ್ರಿ, ಜಗದೀಶ ಮ. ನಿವರಗಿ, ಮಹಮ್ಮದ ಸೋೇಘರ ಇತರರಿದ್ದರು.