ಕೊಳವಿ: ಸಮೀಪದ ಅಜ್ಜನಕಟ್ಟಿ ಗ್ರಾಮದಲ್ಲಿ ಮಾ.2 ರಿಂದ 3ರ ವರಗೆ ಶ್ರೀ ರೇವಣಸಿದ್ದೇಶ್ವರ ಜಾತ್ರೆ ಜರುಗಲಿದೆ. ಮಾ.2 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಸಂಜೆ 4 ಗಂಟೆಗೆ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿ ಆಗಮನ, ರಾತ್ರಿ 10ಕ್ಕೆ ಡೊಳ್ಳಿನ ಪದ, ವಾಲಗ ಜರುಗಲಿವೆ. ಮಾ.3 ರಂದು ಬೆಳಗ್ಗೆ 9 ಗಂಟೆಗೆ ಎಲ್ಲ ದೇವರ ಪಲ್ಲಕ್ಕಿಗಳಿಗೆ ಉಡಿ ತುಂಬುವ ಕಾರ್ಯ, ಗ್ರಾಮಸ್ಥರಿಂದ ನೈವೇದ್ಯ ಸಮರ್ಪಣೆ ಬಳಿಕ ಪಲ್ಲಕ್ಕಿ ಉತ್ಸವ ಜರುಗಲಿದೆ. ಬೆಳಗ್ಗೆ 11ಕ್ಕೆ ಟ್ರ್ಯಾಕ್ಟರ್ ಸ್ಪರ್ಧೆ, ಮಧ್ಯಾಹ್ನ 1ಕ್ಕೆ ಮಹಾಪ್ರಸಾದ ಹಾಗೂ ಸಂಜೆ 6 ಗಂಟೆಗೆ ಭಂಡಾರ ಉತ್ಸವ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.