ಕೈಲಾಂಚ: ಜಗದ್ಗುರು ರೇವಣಸಿದ್ದೇಶ್ವರರು ಜಗತ್ತಿಗೆ ಜ್ಞಾನ ಮತ್ತು ಭಕ್ತಿಯ ಬೆಳಕನ್ನು ತೋರಿದ ಮಹಾಮಹಿಮರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ್ ಅಭಿಪ್ರಾಯಪಟ್ಟರು.
ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರಥೋತ್ಸವ ಅಂಗವಾಗಿ ಭಾನುವಾರ ಸಂಜೆ ಮಠದ ಆವರಣದಲ್ಲಿ ಏರ್ಪಡಿಸಿದ್ದ ಭಕ್ತಿಗೀತೆ, ಜಾನಪದ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗದ್ಗುರು ರೇವಣಸಿದ್ದೇಶ್ವರರು ನೆಲೆಸಿರುವ ಪುಣ್ಯಕ್ಷೇತ್ರದಲ್ಲಿಂದು ನಾವಿದ್ದೇವೆ. ರೇವಣಸಿದ್ದರ ತಪೋಭೂಮಿಯಲ್ಲಿ ದಾಸೋಹಮಠ ಭಕ್ತರ ಹಸಿವನ್ನು ನೀಗಿಸಿದೆ. ದಾಸೋಹಮಠದ ಹಿರಿಯ ಶ್ರೀ ಬಸವಲಿಂಗರಾಜ ಸ್ವಾಮೀಜಿ, ಕಿರಿಯ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಮುಂದಡಿ ಇಡುತ್ತಿದ್ದು, ಜಾತ್ರಾ ಮಹೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಇಂತಹ ಸಮಾಜಮುಖಿ ಕಾರ್ಯ ಮುನ್ನಡೆಸುತ್ತಾ ಭಕ್ತಿಯ ಬೀಜ ಬಿತ್ತಿ ಜನರಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಮೂಡಿಸಿ ಸಮಾಜದ ಉನ್ನತಿಗೆ ಮುಂದಾಗುತ್ತಿರುವುದು ಮಠಕ್ಕೆ ಕಳಶ ಪ್ರಾಯವಿಟ್ಟಂತೆ ಎಂದರು.
ಕುಡಿನೀರುಕಟ್ಟೆ ವಿರಕ್ತಮಠದ ಶ್ರೀ ಶಿವರುದ್ರಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದಾಗ ಮಾತ್ರ ಉತ್ತಮ ದಾರಿ ಕಾಣುತ್ತದೆ. ಎಲ್ಲಿ ಭಕ್ತಿ ಇರುತ್ತದೋ ಅಲ್ಲಿ ಧಾರ್ಮಿಕತೆ ಅಡಗಿರುತ್ತದೆ. ಭಕ್ತಿ ಶ್ರದ್ಧೆಗೆ ಹೆಸರಾದ ಕ್ಷೇತ್ರ ರೇವಣಸಿದ್ದರ ತಪೋಭೂಮಿ ಇಂತಹ ಪವಿತ್ರಸ್ಥಳದಲ್ಲಿ ಭಕ್ತರ ದಾಸೋಹ ಸೇವೆ ನೀಡುತ್ತಿರುವ ಶ್ರೀಗಳ ಕಾರ್ಯ ಅನನ್ಯ ಎಂದರು.
ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಸರಗೂರು ಹೊಸಮಠದ ಶ್ರೀ ಬಸವರಾಜೇಂದ್ರಸ್ವಾಮಿ, ಗುರುವಿನಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಕಲ್ಲುಬಾಳು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಜಾನಪದ ಗಾಯಕರಾದ ಶಿವಾರ ಉಮೇಶ್, ಮಾರಗೌಡನಹಳ್ಳಿ ಶಂಕರಪ್ಪ ಮತ್ತು ತಂಡದವರಿಂದ ಜಾನಪದ, ಭಾವಗೀತೆ, ಭಕ್ತಿಗೀತೆ ಸಂಗೀತ ಕಾರ್ಯಕ್ರಮ ನಡೆಯಿತು. ವಿಶೇಷ ಅತಿಥಿಗಳಾಗಿ ಗಾಯಕಿ ವೈ.ಜಿ. ಉಮಾ, ಹಾಸ್ಯಗಾರ ಮಿಮಿಕ್ರಿಗೋಪಿ ಮನರಂಜನೆ ನೀಡಿದರು.
ಹಲಸಳ್ಳಿ ಗವಿಮಠದ ಶ್ರೀ ಷಡಕ್ಷರ ಸ್ವಾಮೀಜಿ, ಹೆಬ್ಬಣಿ ಮಠದ ಶ್ರೀ ಶಂಭುಲಿಂಗಸ್ವಾಮೀಜಿ, ದಾಸೋಹಮಠದ ಹಿರಿಯ ಶ್ರೀ ಬಸವಲಿಂಗರಾಜ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪೊಲೀಸ್ ಶಂಕರಪ್ಪ, ಗ್ರಾಪಂ ಅಧ್ಯಕ್ಷ ಗಿರೀಶ್, ಸದಸ್ಯ ಮಹದೇವಯ್ಯ, ನಾಗೇಶ್, ಮುಖಂಡರಾದ ಬಿಡದಿ ಶಿವಸ್ವಾಮಿ, ಪೈಂಟ್ ಅಂಗಡಿ ರಾಜಣ್ಣ, ಅವ್ವೇರಹಳ್ಳಿ ಶಿವಲಿಂಗಯ್ಯ, ಸ್ವಾಮಿ, ವಿಭೂತಿಕೆರೆ ಶಿವಲಿಂಗಯ್ಯ, ಪೂಜಾರಿದೊಡ್ಡಿ ಗಂಗಾಧರ್ ಕೋಟಹಳ್ಳಿ ರವಿ, ಉಪನ್ಯಾಸಕ ಕವಣಾಪುರ ಅರುಣ್, ಪ್ರಶಾಂತ್, ರಾ.ಶಿ. ಬಸವರಾಜ್ ಇದ್ದರು.