ಧಾರವಾಡ: ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದಲ್ಲಿನ ಸರ್ಕಾರಿ ನಿವೇಶನಗಳನ್ನು ಕೆಲ ಅನರ್ಹರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರೇವಡಿಹಾಳದ ಬ್ಲಾಕ್ ನಂ. ೨೪, ೭೩ ಹಾಗೂ ೮೪/೧ರ ಸರ್ಕಾರದ ನಿವೇಶನಗಳು ಬೇರೆ ಗ್ರಾಮಗಳ ಹಣವಂತರ ಪಾಲಾಗಿವೆ. ಪರಿಶಿಷ್ಟ ಜಾತಿ- ಪಂಗಡದವರಿಗೆ ಶೇ. ೩೩ರಷ್ಟು ನಿವೇಶನಗಳನ್ನು ನೀಡದೆ ವಂಚಿಸಲಾಗಿದೆ. ಈ ಸಂಬAಧ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಅನರ್ಹರ ಪಾಲಾದ ನಿವೇಶನಗಳನ್ನು ಕೂಡಲೇ ರದ್ದುಪಡಿಸಿ ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಜಿ.ಪಂ. ಸಿಇಒ ಸ್ವರೂಪ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಈರಪ್ಪ ಮಾದರ, ರವಿ ಮಾದರ, ಗುರುಪಾದಯ್ಯ ಮುಪ್ಪಯ್ಯನವರ, ಉಮೇಶ ಮಾದರ, ಶಿವಾನಂದ ಮಾದರ, ಅನಸೂಯಾ ಹರಿಜನ, ಉಮೇಶ ಪೂಜಾರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.